ಫ್ರಾನ್ಸ್ ಅಧ್ಯಕ್ಷರ ಜತೆ ಮೋದಿ ಮಹತ್ವದ ಚರ್ಚೆ

Modi-in-France--01

ಪ್ಯಾರಿಸ್, ಜೂ.3- ನಾಲ್ಕು ದೇಶಗಳಿಗೆ ಆರು ದಿನಗಳ ವಿದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಪ್ಯಾರಿಸ್‍ನಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾ ನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿದರು.   ಭಯೋತ್ಪಾದನೆ, ಪ್ಯಾರಿಸ್ ಒಪ್ಪಂದ, ಭಾರತದ ಪರಮಾಣು ಪೂರೈಕೆ ಸಮೂಹ (ಎನ್‍ಎಸ್‍ಜಿ) ಸದಸ್ಯತ್ವ ಯತ್ನ, ಭೂಮಂಡಲ ಸಂರಕ್ಷಣೆ ಮತ್ತು ವಾತಾವರಣ ಬದಲಾವಣೆಯಂಥ ಮಹತ್ವದ ವಿಷಯಗಳನ್ನು ಕುರಿತು ಈ ಇಬ್ಬರು ನಾಯಕರು ಮಹತ್ವದ ಸಮಾಲೋಚನೆ ನಡೆಸಿದರು.ಈಗಾಗಲೇ ಜರ್ಮನಿ, ಸ್ಪೇನ್ ಮತ್ತು ರಷ್ಯಾ ದೇಶಗಳಿಗೆ ಮೋದಿ ನೀಡಿರುವ ಭೇಟಿ ಫಲಪ್ರದವಾಗಿದ್ದು, ತಮ್ಮ ಕೊನೆ ಹಂತದ ಪ್ರವಾಸವಾಗಿ ಫ್ರಾನ್ಸ್‍ನಲ್ಲಿ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಫಾನ್ಸ್ ಭೇಟಿ ವೇಳೆ ದ್ವಿಪಕ್ಷೀಯ ಸಹಕಾರ ಕುರಿತು ಕೆಲವು ಒಪ್ಪಂದಗಳಿಗೆ ಪ್ರಧಾನಿ ಸಹಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin