ಫ್ರಾನ್ಸ್ ನಲ್ಲಿ ಆರಂಭವಾಗಿರುವ ಕಾನ್ಸ್-2017 ರೆಡ್ ಕಾರ್ಪೆಟ್‍ನಲ್ಲಿ ಹೆಜ್ಜೆ ಹಾಕಿದ ಡಿಪ್ಪಿ

DEEPIKA-PADKONE

ದೀಪಿಕಾ ಪಡುಕೋಣೆ-ಬಾಲಿವುಡ್ ಮತ್ತು ಹಾಲಿವುಡ್‍ನಲ್ಲಿ ಸಂಚಲನ ಮೂಡಿಸಿರುವ ನಟಿ ದೀಪಿಕಾ ಪಡುಕೋಣೆ ಈಗ ಫ್ರಾನ್ಸ್‍ನಲ್ಲಿ ಆರಂಭವಾಗಿರುವ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಚಿತ್ರೋತ್ಸವ ಶುರುವಾದ ಎರಡು ದಿನಗಳಲ್ಲೇ ಎರಡು ವಿಭಿನ್ನ ವಸ್ತ್ರವಿನ್ಯಾಸದ ಉಡುಗೆ ಧರಿಸಿ ಡಿಪ್ಪಿ ಕಂಗೊಳಿಸಿದಳು. ಮೇ 17ರಿಂದ ಆರಂಭವಾದ ಸಿನಿಮೋತ್ಸವದಲ್ಲಿ ದೀಪಿಕಾ ಇದೇ ಮೊದಲ ಬಾರಿಗೆಲೋರಿಯಲ್ ಕಾಸ್ಮೆಟಿಕ್ಸ್ ಬ್ರಾಂಡ್‍ನ ಪ್ರಚಾರ ರಾಯಭಾರಿಯಾಗಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಗಮನ ಸೆಳೆದರು.ಡಿಪ್ಪಿಯ ಒನಪು-ವಯ್ಯಾರ ಕಂಡು ಕ್ಯಾಮೆರಾಮನ್‍ಗಳು ಮನದಣಿಯೇ ಫೋಟೊಗಳನ್ನು ಕ್ಲಿಕ್ಕಿಸಿದರು. ಈ ಪ್ರತಿಷ್ಠಿತ ಕಂಪನಿಗೆ ಡಿಪ್ಪಿ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಸಂಸ್ಥೆಯ ಟ್ವೀಟರ್‍ಗಳು ಮತ್ತು ಇನ್‍ಸ್ಟಾಗ್ರಾಂ ಖಾತೆಗಳಲ್ಲಿ ಈ ನೀಳಕಾಯದ ನಟಿಯ ಚಿತ್ರಗಳು ರಾರಾಜಿಸುತ್ತಿವೆ. ಸಿನಿಮಾದಿಂದ ಸಿನಿಮಾಕ್ಕೆ ಪ್ರೌಢ ಅಭಿನಯದ ಮೂಲಕ ಜನಪ್ರಿಯತೆಯ ಉತ್ತುಂಗದಲ್ಲಿರುವ ದೀಪಿಕಾ, ಈ ಮೂಲಕ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಿಂಚಬೇಕೆಂಬ ಬಹುದಿನ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾಳೆ. 17 ದಿನಗಳ ಕಾಲ ನಡೆಯುವ ಕಾನ್ಸ್ 2017 ಸಿನಿಮಾ ಉತ್ಸವದಲ್ಲಿ ಬಾಲಿವುಡ್ ಖ್ಯಾತ ತಾರೆಯರಾದ ಐಶ್ಚರ್ಯ ರೈ, ಸೋನಂ ಕಪೂರ್, ಮಲ್ಲಿಕಾ ಶೆರಾವತ್ ಸಹ ಮಿಂಚಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin