ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಉತ್ತಮ ವಾತಾವರಣ : ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್

fkcci

ಬೆಂಗಳೂರು, ಮಾ.7-ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಉತ್ತಮ ವಾತಾವರಣ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲವಿದ್ದು, ಬೇರೆ ದೇಶಗಳು ಇತ್ತ ಗಮನ ಹರಿಸಿವೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಸಿ.ದಿನೇಶ್ ತಿಳಿಸಿದರು.  ಎಫ್‍ಕೆಸಿಸಿಐ ಸಭಾಂಗಣದಲ್ಲಿ ಜೆಕ್ ಗಣ ರಾಜ್ಯದ ಹದಿನೈದು ವಾಣಿಜ್ಯೋದ್ಯಮಿ ಗಳ ನಿಯೋಗಕ್ಕೆ ರಾಜ್ಯದ ವಿವಿಧ ಕೈಗಾರಿಕೋ ದ್ಯಮಿಗಳನ್ನು ಪರಿಚಯ ಮಾಡಿಕೊಟ್ಟು ಅವರು ಮಾತನಾಡಿದರು.  ನಮ್ಮ ರಾಜ್ಯವು ಮಾಹಿತಿ-ತಂತ್ರಜ್ಞಾನ, ಪ್ರವಾಸೋದ್ಯಮ, ಶಿಕ್ಷಣ, ಏರೋಸ್ಪೇಸ್, ಕೃಷಿ, ತೋಟಗಾರಿಕೆ, ವ್ಯಾಪಾರಗಳ ಹಬ್ ಆಗಿದೆ . ಹಾಗಾಗಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವಿದೆ ಎಂದು ತಿಳಿಸಿದರು.

ಜೆಕ್ ಗಣರಾಜ್ಯದ ನಿಯೋಗದೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಶುದ್ಧ ಕುಡಿಯುವ ನೀರು, ಕೊಳಚೆ ನೀರಿನ ಸಂಸ್ಕರಣೆ, ಎಂಜಿನಿಯರಿಂಗ್, ಮೆಷಿನ್‍ಟೂಲ್ಸ್, ಅಟೋಮೊಟಿವ್ ಬಿಡಿ ಭಾಗಗಳು ಹಾಗೂ ಏರೋಸ್ಪೇಸ್ ವಲಯದಲ್ಲಿ ಹೂಡಿಕೆ  ಮಾಡಲು ಒಲವು ತೋರಿದೆ. ಜೆಕ್ ರಿ ಪಬ್ಲಿಕ್ ತಂಡದ ನೇತೃತ್ವವನ್ನು ಅಲ್ಲಿನ ರಾಯಭಾರಿ ಮಿಲಾನ್ ಹೊವೊರ್ಕಾ ವಹಿಸಿದ್ದರು. ರಾಜ್ಯದ ವಿವಿಧ ವಾಣಿಜ್ಯೋದ್ಯಮಿಗಳು ಈ ವೇಳೆ ತಮ್ಮ ಉತ್ಪಾದನಾ ವಲಯಗಳ ವಿವರ ನೀಡಿ ಸಂಭಾವ್ಯ ಹೂಡಿಕೆಗಳ ಸಾಧ್ಯತೆ ಕುರಿತು ವಿಚಾರವಿನಿಮಯ ಮಾಡಿಕೊಂಡರು. ಎಫ್‍ಕೆಸಿಸಿಐ ಉಪಾಧ್ಯಕ್ಷ ಕೆ.ರವಿ, ಕೈಗಾರಿಕಾ ಸಮಿತಿ ಅಧ್ಯಕ್ಷ ಬಿ.ಪಿ.ಶಶಿಧರ್, ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin