ಬಂಡಿ ರಸ್ತೆ ಒತ್ತುವರಿ ತೆರವು

Spread the love

kr--pete

ಕೆ.ಆರ್.ಪೇಟೆ, ಸೆ.16- ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಕೆರೆ ಹಿಂಭಾಗದಲ್ಲಿ ಜಮೀನಿಗೆ ಹೋಗುವ ಖರಾಬು ಬಂಡಿ ರಸ್ತೆ ಒತ್ತುವರಿಯನ್ನು ತಾಲೂಕು ಸರ್ವೆ ಅಧಿಕಾರಿ ದೇವೇಗೌಡ ನೇತೃತ್ವದ ಅಧಿಕಾರಿಗಳ ತಂಡವು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಯಿತು.ತಾಲೂಕು ಸರ್ವೆ ಅಧಿಕಾರಿ ದೇವೇಗೌಡ ಮಾತನಾಡಿ, ಸರ್ಕಾರಿ ಗುಂಡು ತೋಪು, ಕೆರೆ-ಕಟ್ಟೆಗಳು, ಸ್ಮಶಾನ ಜಾಗ, ಶಾಲಾ-ಕಾಲೇಜು ಹಾಗೂ ಬಂಡಿ ರಸ್ತೆ ಖರಾಬು ಜಾಗವನ್ನು ಯಾರೂ ಒತ್ತುವರಿ ಮಾಡಿಕೊಳ್ಳಬಾರದು. ಒತ್ತುವರಿ ಮಾಡಿಕೊಂಡವರು ಎಷ್ಟೇ ಬಲಾಢ್ಯರಾದರೂ ಸಹ ಅದನ್ನು ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುವ ಮೂಲಕ ಸರ್ರ್ಕಾರಿ ಆಸ್ತಿಯನ್ನು ಉಳಿಸಿಕೊಳ್ಳಲಾಗುವುದು. ಎಂದರು.
ಗ್ರಾಮ ಲೆಕ್ಕಾಧಿಕಾರಿ ಹರೀಶ್, ಹೇಮಾವತಿ ಜಲಾಶಯ ಯೋಜನೆಯ ನಂ.20ರ ಎಇಇ ನೀಲೇಗೌಡ, ಸಹಾಯಕ ಇಂಜಿನಿಯರ್ ರವಿ ಮತ್ತಿತರರಿದ್ದ ಅಧಿಕಾರಿಗಳ ತಂಡವು ಒತ್ತುವರಿಯನ್ನು ಸೌಹಾರ್ಧಯುತವಾಗಿ ತೆರವುಗೊಳಿಸಿದರು.

 

► Follow us on –  Facebook / Twitter  / Google+

 

 

 

Facebook Comments

Sri Raghav

Admin