ಬಚ್ಚನ್ ಆಸ್ತಿ ಸಮಪಾಲು
ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಲಿಂಗ ಸಮಾನತೆ ಬಗ್ಗೆ ಆದರ್ಶಪ್ರಾಯ ಮಾತುಗಳನ್ನಾಡಿದ್ದಾರೆ. ಜಂಡರ್ ಈಕ್ವಾಲಿಟಿಗೆ ಒತ್ತು ನೀಡುವಂತೆ ತಮ್ಮಿಬ್ಬರೂ ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ನೀಡುವುದಾಗಿಯೂ ಘೋಷಿಸಿ ಹೆಣ್ಣು ಮಕ್ಕಳಿಗೂ ಸಮಾನತೆ ಎಂಬ ತತ್ತ್ವವನ್ನು ಪ್ರತಿಪಾದಿಸಿದ್ದಾರೆ. ನನ್ನ ನಿಧನಾನಂತರ ನನ್ನ ಮಗ ಅಭಿಷೇಕ್ ಬಚ್ಚನ್ ಮತ್ತು ಮಗಳು ಶ್ವೇತಾ ನಂದಾ ಅವರಿಗೆ ಆಸ್ತಿಯಲ್ಲಿ ಸಮಪಾಲು ದಕ್ಕುತ್ತದೆ. ಇದು ನನ್ನ ಬಯಕೆಯಾಗಿದೆ ಎಂದು ಬಿಗ್-ಬಿ ಹೇಳಿದ್ದಾರೆ. ನಾವು ಸಮಾನರು ಮತ್ತು ಲಿಂಗ ಸಮಾನತೆ ಎಂಬ ಶೀರ್ಷಿಕೆ ಇರುವ ಭಿತ್ತಿ ಪತ್ರ ಇರುವ ಚಿತ್ರವನ್ನು 74 ವರ್ಷದ ಬಚ್ಚನ್ ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.. ನಾನು ಮೃತಪಟ್ಟ ಮೇಲೆ ನನ್ನ ಸ್ವತ್ತನ್ನು ನನ್ನ ಪುತ್ರಿ ಮತ್ತು ಪುತ್ರನಿಗೆ ಸರಿಸಮಾನವಾಗಿ ಹಂಚಿಕೆಯಾಗುತ್ತದೆ ಲಿಂಗ ಸಮಾನತೆ, ನಾವೆಲ್ಲ ಸಮಾನರು ಎಂದು ಬಿಗ್-ಬಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಮಹಿಳಾ ಸಬಲೀಕರಣದ ಮೇಲೆ ಬೆಳಕು ಚೆಲ್ಲುವ ಪಿಂಕ್ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ನಟಿಸಿ ಬಿಬಿ ಗಮನ ಸೆಳೆದಿದ್ದರು. ಈ ಚಿತ್ರ ವೀಕ್ಷಿಸಿದ ರಾಷ್ಟ್ರಪತಿ ಡಾ. ಪ್ರಣವ್ ಮುಖರ್ಜಿ ಬಚ್ಚನ್ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ್-3 ಚಿತ್ರದಲ್ಲಿ ಸುಭಾಷ್ ನಾಗ್ರೆ ಪಾತ್ರದಲ್ಲಿ ಮೆಗಾಸ್ಟಾರ್ ಮತ್ತೊಮ್ಮೆ ಮಿಂಚಲಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS