ಬಜೆಟ್‍ನಲ್ಲಿ ಮಕ್ಕಳ ಯೋಜನೆಗಳು ನಿರಾಶಾದಾಯಕ : ಸತ್ಯಾರ್ಥಿ ಅಸಮಾಧಾನ

Spread the love

Kailash-Satyarthi

ನವದೆಹಲಿ, ಫೆ.5-ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2017-18ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಮಕ್ಕಳ ಕಲ್ಯಾಣ ಯೋಜನೆಗಳಿಗಾಗಿ ಮಂಜೂರು ಮಾಡಿರುವ ಅನುದಾನದಲ್ಲಿ ಏರಿಕೆಯಾಗಿದ್ದರೂ, ಅವು ನಿರಾಶಾದಾಯಕವಾಗಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕøತರೂ ಆದ ಮಕ್ಕಳ ಹಕ್ಕುಗಳ ರಕ್ಷಣೆ ಕಾರ್ಯಕರ್ತ ಕೈಲಾಶ್ ಸತ್ಯಾರ್ಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ದೇಶದ ಜನಸಂಖ್ಯೆಯಲ್ಲಿ ಶೇ.39ರಷ್ಟಿರುವ ಮಕ್ಕಳ ಅಭಿವೃದ್ದಿಗಾಗಿ ಈ ಸಾಲಿನ ಬಜೆಟ್‍ನಲ್ಲಿ ಪ್ರೇರಕ ಮಂಜೂರಾತಿ ನೀಡಿಲ್ಲ, ಅಲ್ಲದೇ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸೂಕ್ರ ಯೋಜನೆಗಳನ್ನೂ ಪ್ರಕಟಿಸಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇದೇ ಅಭಿಪ್ರಾಯವನ್ನು ಮಕ್ಕಳಗಳ ಹಕ್ಕುಗಳ ರಕ್ಷಣಾ ಸಂಸ್ಥೆಯಾದ ಕ್ರೈ ಸಹ ವ್ಯಕ್ತಪಡಿಸಿದೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಮಕ್ಕಳ ಕಲಾಣ ಯೋಜನೆಗಳಿಗೆ ಒಟ್ಟು ಮಂಜೂರಾತಿ ನಿಧಿಯಲ್ಲಿ ಕೇವಲ 3.32ರಷ್ಟು ಮೀಸಲಿಡಲಾಗಿದೆ. ಅಲ್ಲದೇ ಮಕ್ಕಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‍ಪಿಎಸಿ) ಮಾಡಿದ್ದ ಶೇ.5ರಷ್ಟು ಹಣಕಾಸು ನೆರವಿನ ಶಿಫಾರಸು ಕೂಡ ಅನುಷ್ಠಾನಗೊಂಡಿಲ್ಲ. ರಾಷ್ಟ್ರೀಯ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಯೋಜನೆಗಾಗಿ ಕನಿಷ್ಠ ಪ್ರಮಾಣದಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಸತ್ಯಾರ್ಥಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin