ಬಡ ಪ್ರಿಯಕರನನ್ನು ಮದುವೆಯಾಗಲು ರಾಜವೈಭೋಗ ತೇಜಿಸಲು ಸಿದ್ಧಳಾದ ರಾಜಕುಮಾರಿ..!
ಟೋಕಿಯೋ, ಮೇ 19-ಉದಯರವಿ ನಾಡು ಜಪಾನಿನ ರಾಜಕುಮಾರಿ ಮಾಕೋ ಶ್ರೀಸಾಮಾನ್ಯನೊಬ್ಬನನ್ನು ವಿವಾಹವಾಗುವುದರಿಂದ ಅರಸೊತ್ತಿಗೆಯನ್ನು ತ್ಯಜಿಸಬೇಕಿದೆ. ಜಪಾನ್ ಚಕ್ರವರ್ತಿ ಅಕಿಹಿಟೋ ಅವರ ಹಿರಿಯ ಮೊಮ್ಮಗಳು ಮಾಕೋ 25 ವರ್ಷದ ತಿ ಕೊಮುರೋ ಅವರನ್ನು ಮದುವೆಯಾಗಲಿದ್ದಾರೆ. ಟೋಕಿಯೋದ ಅಂತಾರಾಷ್ಟ್ರೀಯ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಗಳಾಗಿ ಇವರಿಬ್ಬರು ವ್ಯಾಸಂಗ ಮಾಡುತ್ತಿದ್ದಾಗ ಪ್ರೇಮಾಂಕುರಿಸಿತ್ತು.
ಜಪಾನ್ ರಾಜವಂಶಸ್ಥರ ಕಾನೂನು ಪ್ರಕಾರ ರಾಜಕುಮಾರಿಯೊಬ್ಬಳು ತೀರಾ ಸಾಮಾನ್ಯ ವ್ಯಕ್ತಿಯನ್ನು ವಿವಾಹವಾದಲ್ಲಿ ಆಕೆ ರಾಜವೈಭೋಗವನ್ನು ತ್ಯಜಿಸಬೇಕಾಗುತ್ತದೆ. ಮಾಕೋ ಮತ್ತು ಕೊಮುರೋ ಅವರ ನಿಶ್ಚಿತಾರ್ಥ ಶೀಘ್ರ ನೆರವೇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
< Eesanje News 24/7 ನ್ಯೂಸ್ ಆ್ಯಪ್ >