ಬಣ್ಣನಕೆರೆ ಗ್ರಾಮದ ಒತ್ತುವರಿ ತೆರವು

kr--pete

ಕೆ.ಆರ್.ಪೇಟೆ, ಸೆ.20- ಬೂಕನಕೆರೆ ಹೋಬಳಿ ಬಣ್ಣನಕೆರೆ ಗ್ರಾಮದ ಸಾರ್ವಜನಿಕ ಸ್ಮಶಾನ, ಗುಂಡು ತೋಪು ಹಾಗೂ ಕೆರೆ ಒತ್ತುವರಿಯನ್ನು ತಾಲೂಕು ಸರ್ವೆ ಅಧಿಕಾರಿ ದೇವೇಗೌಡ ನೇತೃತ್ವದ ತಂಡ ಪೊಲೀಸರ ಸರ್ಪಗಾವಲಿನಲ್ಲಿ ತೆರವುಗೊಳಿಸಿತು.ಗ್ರಾಮದ ಸರ್ವೆ ನಂ.6ರ ಒಟ್ಟು 7ಎಕರೆ ಕೆರೆಯ ಪೈಕಿ 5ಎಕರೆ, 2 ಎಕರೆ ಸ್ಮಶಾನದ ಜಾಗ, 24 ಗುಂಟೆಯ ಗುಂಡುತೋಪು ಸಂಪೂರ್ಣ ಒತ್ತುವರಿಯಾಗಿದ್ದನ್ನು ಪರಿಶೀಲಿಸಿದ ತಾಲೂಕು ಸರ್ವೆ ಅಧಿಕಾರಿ ದೇವೇಗೌಡ, ರಾಜಸ್ವ ನಿರೀಕ್ಷಕ ರಾಜಮೂರ್ತಿ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್‍ಐ ಪ್ರಮೋದ್ ನೇತೃತ್ವದಲ್ಲಿ ಹದ್ದುಬಸ್ತ್ ಕಲ್ಲುಗಳನ್ನು ನೆಟ್ಟು ಸರ್ಕಾರಿ ಆಸ್ತಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆದರು.
ಸರ್ವೆ ಸಂದರ್ಭದಲ್ಲಿ ಕೆಲವರು ಅಡ್ಡಿಪಡಿಸಲು ಯತ್ನಿಸಿದರು ಆದರೆ ಅಧಿಕಾರಿಗಳ ತಂಡವು ಅವರ ಮನವೊಲಿಸುವ ಮೂಲಕ ಸೌಹಾದರ್ಯು ತವಾಗಿ ತೆರವುಗೊಳಿಸಿದರು. ಸರ್ಕಾರವು ಸಾರ್ವಜನಿಕರಿಗಾಗಿ ಮೀಸಲಟ್ಟಿರುವ ಕೆರೆಯು ಜನಜಾನುವಾರು ಗಳಿಗೆ ಹಾಗೂ ಬೇಸಾಯಕ್ಕೆ ನೀರುಣಿಸಲು ಹಾಗೂ ಸ್ಮಶಾನವು ಎಲ್ಲಾ ಜನಾಂಗದವರು ಮೃತಪಟ್ಟಾಗ ಶವಸಂಸ್ಕಾರ ಮಾಡಲು ಅನುಕೂಲವಾಗುತ್ತದೆ. ಗುಂಡು ತೋಪು ಅರಣ್ಯ ಅಭಿವೃದ್ಧಿ ಮಾಡಿ ಪರಿಸರ ಸಂರಕ್ಷಣೆ ಮಾಡಲು ಸಹಾಯಕವಾಗುತ್ತದೆ ಹಾಗಾಗಿ ಬಣ್ಣನಕೆರೆ ಗ್ರಾಮಸ್ಥರ ಹತ್ತಾರು ವರ್ಷಗಳ ಬೇಡಿಕೆಯಾಗಿದ್ದ ಈ ಕೆರೆ, ಸ್ಮಶಾನ, ಗುಂಡುತೋಪು ಒತ್ತುವರಿಯನ್ನು ತೆರವುಗೊಳಿಸಿಕೊಡಲಾಗಿದೆ. ಇದನ್ನು ಅಭಿವೃದ್ಧಿಪಡಿಸಿಕೊಂಡು ಗ್ರಾಮದ ಬಳಕೆಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಸರ್ವೆ ಅಧಿಕಾರಿ ದೇವೇಗೌಡ ಈ ಸಂದರ್ಭದಲ್ಲಿ ಹಾಜರಿದ್ದ ಸಾರ್ವಜನಿಕರಲ್ಲಿ ಮನವಿ ಮಾಡಿದರು.

 

► Follow us on –  Facebook / Twitter  / Google+

Sri Raghav

Admin