ಬದಾಮಿ ರಸ್ತೆಗಳಲ್ಲಿ ಧೂಳಿನ ಅವಾಂತರ ಸಾರ್ವಜನಿಕರಿಗೆ ಗಂಡಾಂತರ

11
ಬಾದಾಮಿ,ಫೆ.13- ಪ್ರತಿ ದಿನ ಸಾವಿರಾರು ವಾಹನಗಳು ಎಡಬಿಡದೆ ರಭಸವಾಗಿ ಬರುವಾಗ ರಸ್ತೆಯ ಅಕ್ಕಪಕ್ಕದಲ್ಲಿರುವ ಮಣ್ಣು ಗಾಳಿಯ ರಭಸಕ್ಕೆ ದೂಳು ಸುಂಟರಗಾಳಿಯಂತೆ ಸಾರ್ವಜನಿಕರಿಗೆ ಮೂಗಿನ ಮೂಲಕ ಶ್ವಾಸಕೋಶವನ್ನು ತಲುಪುತ್ತದೆ, ಈ ದೂಳು ದೇಹದ ಒಳಗೆ ಹೋಗಿ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಇಂತಹ ರಸ್ತೆಯನ್ನೆ ನೆಚ್ಚಿಕೊಂಡಿರುವ ಜನಸಾಮಾನ್ಯ ಮಾತ್ರ ದಿನನಿತ್ಯ ಗಂಡಾಂತರದಲ್ಲಿ ಜೀವನ ದೂಡುತ್ತಿರುವುದು ವಿಪರ್ಯಾಸದ ಸಂಗತಿ. ಈ ರಸ್ತೆ ಅಕ್ಷರಶಃ ಯಮಲೋಕಕ್ಕೆ ದಾರಿ ತೋರುವಂತಿದೆ.ಈ ರಸ್ತೆ ಇರುವುದು ಐತಿಹಾಸಿಕ ನಗರಿ ಎಂದು ಜಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದು ದೇಶ ವಿದೇಶದಿಂದ ಪ್ರತಿದಿನ ನೂರಾರು ಪ್ರವಾಸಿಗರು ಬಂದು ಹೋಗುವ ಚಾಲುಕ್ಯರ ರಾಜಧಾನಿ ಬಾದಾಮಿಯಲ್ಲಿ.

ಕೋಣಮ್ಮ ದೇವಸ್ಥಾನದಿಂದ ಹಿಡಿದು ರಾಮದುರ್ಗ ರಸ್ತೆಯ ರೈಲ್ವೆ ಗೇಟ್‍ವರೆಗೂ ಹರಡಿದ್ದು ಬಾದಾಮಿಗೆ ಬರುವ ಜನರನ್ನು ದೂಳು ಸ್ವಾಗತಿಸುತ್ತಿರುವುದು ಪ್ರವಾಸಿಗರೂ ನಾವು ಶಿಲ್ಪಕಲೆಯ ತವರೂರಿಗೆ ಬಂದಿದ್ದೇವೋ ಇಲ್ಲಾ ಯಾವುದೊ ಹಾಳು ಕೊಂಪೆಗೆ ಬಂದಿದ್ದೇವೋ ಎಂದು ಬಾದಾಮಿಯನ್ನು ಶಪಿಸುತ್ತಿರುವುದು ಜನತೆಯ ದೌರ್ಭಾಗ್ಯವಾಗಿರುವುದು ನಿಜಕ್ಕೂ ದುರಂತ, ಈ ಮಧ್ಯೆ ಧೂಳಿನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಇದು ಕೆಮ್ಮು ದಮ್ಮುಗಳ ಭಾಗ್ಯವನ್ನು ನೀಡುತ್ತಿರುವುದರಿಂದ ಜನರು ಪ್ರತಿದಿನ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವನಿಕರು ಪುರಸಭೆಯ ಕಾರ್ಯವೈಖರಿಗೆ ಬೇಸತ್ತಿದ್ದಾರೆ ಯಾವಾಗ ಬಾದಾಮಿ ಸುಂದರ ನಗರವಾಗುತ್ತೊ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪುರಸಭೆ, ನಗರಸಭೆಗಳಲ್ಲಿ ಈ ಮಣ್ಣನ್ನು ತೆಗೆಯಲು ನಮ್ಮ ರಾಜ್ಯದ ಯಲಬುರ್ಗ, ತುಮಕೂರ, ಕೊಪ್ಪಳ, ಕುಕನೂರಗಳಲ್ಲಿ ಯಂತ್ರಗಳ ಮೂಲಕ ಜನರಿಗೆ ಧೂಳು ಮುಕ್ತ ಮಾಡಿಸಿ ಸಮಸ್ಯೆಗಳಿಂದ ದೂರ ಮಾಡಿದ್ದಾರೆ, ನಮ್ಮವರು ಅಂತಹ ಯಂತ್ರಗಳ ಮೂಲಕ ನಮ್ಮ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆಖಾಸಗಿ ಒಡೆತನದಲ್ಲಿ ಪ್ರಾರಂಭವಾಗಿರುವ ರಸ್ತೆ ಕಾಮಗಾರಿ ಹಾಗೂ ತುಂಡು ಗುತ್ತಿಗೆಯವರಿಂದ ನಿರ್ಮಿಸುತ್ತಿರುವ ರಸ್ತೆ ಅಕ್ಕ ಪಕ್ಕದಲ್ಲಿ ಚರಂಡಿ ಕಾಮಗಾರಿಯನ್ನು ಮಾಡುತ್ತಿದ್ದಾರೆ.

ಈ ಕಾಮಗಾರಿಯು ಕಳಪೆಯಾಗಿದ್ದು ಮಾಡಿರುವ ಚರಂಡಿಯನ್ನು ಸರಿಯಾಗಿ ಕ್ಯೂರಿಂಗ ಮಾಡದೇ ನಿರ್ಲಕ್ಷ ದೋರಣೆ ಮಾಡುತ್ತಿದ್ದು ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. 5 ವರ್ಷ ಕಳೆದರು ಕಾಮಗಾರಿಯು ಆಮೆಗತಿಯಲ್ಲಿ ಸಾಗಿದ್ದು ರಾಮದುರ್ಗದಿಂದ ಬಾದಾಮಿಗೆ ಬರುವುದರಲ್ಲಿ ವಾಹನಗಳಷ್ಟೆ ಅಲ್ಲ ಜನರು ಹೈರಾಣರಾಗುತ್ತಿದ್ದಾರೆ ಎಂದು ಪ್ರಜ್ನೆವಂತರ ನಾಗರಿಕರು ಕೆಸಿಪ್ ಕಾಮಗಾರಿಯನ್ನು ಶಪಿಸುತ್ತಿದ್ದಾರೆಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಐತಿಹಾಸಿಕ ನಗರದ ರಸ್ತೆ ಸುಧಾರಿಸಿ ವಿವಿಧ ದೇಶಗಳಿಂದ ರಾಜ್ಯಗಳಿಂದ, ಊರುಗಳಿಂದ ಬರುವ ಪ್ರವಾಸಿಗರಿಗೆ ಸುಸಜ್ಜಿತ ರಸ್ತೆಯನ್ನು ಶೀಘ್ರವಾಗಿ ಒದಗಿಸಿದರೆ ಬಾದಾಮಿಯ ಜನರೊಂದಿಗೆ ಪ್ರವಾಸಿಗರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬುದು ಪ್ರಜ್ನೆವಂತರ  ನಾಗರಿಕರ ಅಂಬೋಣ.  ಧೂಳಿನಿಂದ ವಯಸ್ಸಾದವರಿಗೆ ತೀವ್ರ ತೊಂದರೆಯುಂಟಾಗಿದ್ದು, ಆಸ್ಪತ್ರೆಗೆ ಅಲೆದಾಡುವಂತಾಗಿದೆ. ನೆಮ್ಮದಿಯಿಂದ ಜೀವನ ಸಾಗಿಸುವುದು ದುಸ್ತರವಾಗಿದೆ, ಸಂಬಂಧಪಟ್ಟವರು ಆದಷ್ಟು ಬೇಗ ಬಾದಾಮಿಯನ್ನು ಧೂಳುಮುಕ್ತ ವಾಗಿಸಬೇಕು
 – ಬಸಪ್ಪ ಯಲಿಗಾರ,ಬಾದಾಮಿ

ಕೆಸಿಪ್ ಕಾಮಗಾರಿಯು ಬಾಳ ನಿಧಾನವಾಗುತ್ತಿದೆ. 5 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ, ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಚರಂಡಿಗಳ ಕಾಮಗಾರಿ ಕಳಪೆಯಾಗಿದ್ದು ನೀರಿನಿಂದ ಸರಿಯಾಗಿ ಕ್ಯೂರಿಂಗ್ ಮಾಡದೇ ಅಲಕ್ಷ್ಯ ತೋರುತ್ತಿದ್ದಾರೆ. ಆದಷ್ಟು ಬೇಗ ಕಾಮಗಾರಿ ಚುರುಕಾಗಿ ಸಾರ್ವಜನಿಕರಿಗೆ ಸುಸಜ್ಜಿತ ರಸ್ತೆ ನಿರ್ಮಿಸಬೇಕು.
                                                                                                                                        -ಪ್ರಭು ಶೆಟ್ಟರ, ಪ್ರಭು ಎಂಟರ್‍ಪ್ರೈಸಿಸ್ ಮಾಲಕ, ಬಾದಾಮಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin