ಬರದಿಂದ ಕಂಗೆಟ್ಟಿದ್ದ ಅನ್ನದಾತರಿಗೆ ತಂಪೆರೆದ ವರುಣ

turvekere-rain
ತುರುವೇಕೆರೆ, ಏ.22- ಪಟ್ಟಣ ಹಾಗೂ ದಂಡಿನಶಿವರ ಸುತ್ತಮುತ್ತ ತಾಲ್ಲೂಕಿನಾದ್ಯಂತ ಅರ್ಧ ತಾಸಿಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಸಹಿತ ಮಳೆಯಿಂದಾಗಿ ಬರದಿಂದ ಕಂಗಾಲಾಗಿದ್ದ ಅನ್ನದಾತನಿಗೆ ತುಸು ಸಮಾಧಾನ ತಂದಂತಾಗಿದೆ.ತೀವ್ರ ಬರದಿಂದ ಕಂಗೆಟ್ಟಿದ್ದ ತಾಲೂಕಿನ ಜನತೆ ಮಳೆಯ ಆಗಮನದಿಂದ ಹರ್ಷಚಿತ್ತರಾಗಿದ್ದಾರೆ. ಶುಕ್ರವಾರ ಸಂಜೆ 4 ಗಂಟೆಗೆ ಆರಂಬಗೊಂಡ ಬಿರುಗಾಳಿ ಸಹಿತದ ಮಳೆಯ ರುದ್ರನರ್ತನಕ್ಕೆ ದಂಡಿನಶಿವರ ಬಸ್ ನಿಲ್ದಾಣದ ಸಮೀಪದಲ್ಲಿದ ಆಲದ ಮರ ಮುರಿದು ರಸ್ತೆಗೆ ಬಿದ್ದಿದೆ. ತೋಟಗಳಲ್ಲಿ ಅಡಿಕೆ, ತೆಂಗು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದಿವೆ.

ಕಸಬಾ ಹೋಬಳಿ ಮಾದಪಟ್ಟಣದಲ್ಲಿ ಬೇವಿನ ಮರವೊಂದು ರಸ್ತೆಗೆ ಬಿದ್ದಿದು, ಅಮ್ಮಸಂದ್ರ ರೈಲ್ವೆ ಗೇಟ್ ಬಳಿಯಲ್ಲಿರುವ ಪುಟ್ಟಸಾಮಿ ಮನೆಯ ಹಂಚು, ಸೀಟ್ ಮಳೆಯ ಬಿರುಗಾಳಿಗೆ ಹಾರಿ ಹೋಗಿದ್ದು, ರಾಮಡಿಹಳ್ಳಿ ಗ್ರಾಮದ ಬಸವರಾಜು ವಾಸದ ಮನೆಗೆ ಮಳೆಯ ನೀರು ಅಪಾರ ಪ್ರಮಾಣದಲ್ಲಿ ನುಗ್ಗಿದ ಪರಿಣಾಮ ಮನೆಯಲ್ಲಿನ ದವಸ ದಾನ್ಯಗಳು ಪದಾರ್ಥಗಳು ನೆನೆದು ತೊಪ್ಪೆಯಾಗಿವೆ. ಮಳೆಯ ನರ್ತನಕ್ಕೆ ಅಪಾರ ಪ್ರಮಾಣದ ಸಾವಿರಾರು ರೂಗಳ ನಷ್ಟ ಸಂಭವಿಸಿದೆ. ಒಟ್ಟಾರೆ ಸುಮಾರು ದಿನಗಳಿಂದ ಸತಾಯಿಸುತ್ತಿದ್ದ ಮಳೆರಾಯ ಕಡೇಗೂ ಕೃಪೆ ತೋರಿ ಉತ್ತಮ ಮಳೆ ಸುರಿಸಿದ್ದಾನೆ.

ವಿದ್ಯುತ್ ವ್ಯತ್ಯಯ: ದಂಡಿನಶಿವರ, ಕಸಬಾ ಹೋಬಳಿಯ ಆಸುಪಾಸಿನ ಅನೇಕ ಗ್ರಾಮಗಳಲ್ಲಿ ಬಿರುಗಾಳಿಗೆ ಸಿಲುಕಿ, ವಿದ್ಯುತ್ ಕಂಬಗಳು ನೆಲಕಚ್ಚಿದ್ದ ಪರಿಣಾಮ ವಿದ್ಯುತ್ ವ್ಯತ್ಯಯವಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin