ಬರಾಕ್ ಅಧ್ಯಕ್ಷರಾಗಿದ್ದ ನೇಮಕಗೊಂಡಿದ್ದ 46 ಅಟಾರ್ನಿಗಳ ರಾಜೀನಾಮೆಗೆ ಎಜಿ ಮನವಿ

Spread the love

AG-Obama

ವಾಷಿಂಗ್ಟನ್, ಮಾ.11-ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೇಮಕಗೊಂಡಿದ್ದ 46 ಅಟಾರ್ನಿಗಳು ರಾಜೀನಾಮೆ ನೀಡಬೇಕೆಂದು ಅಮೆರಿಕದ ಅಟಾರ್ನಿ ಜನರಲ್ (ಎಜಿ) ಜೆಫ್ ಸೆಷನ್ಸ್ ಕೋರಿದ್ದಾರೆ. ನ್ಯಾಯಾಂಗ ಇಲಾಖೆ ಪುನಾರಚನೆ ಹಾಗೂ ಏಕರೂಪ ಪರಿವರ್ತನೆಯ ಭಾಗವಾಗಿ ಎಜಿ ಈ ಮನವಿ ಮಾಡಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ಒಬಾಮಾ ಅವರಿಂದ 2009ರಲ್ಲಿ ನೇಮಕಗೊಂಡಿದ್ದ ನ್ಯೂಯಾರ್ಕ್‍ನ ದಕ್ಷಿಣ ಜಿಲ್ಲಾ ಅಟಾರ್ನಿ ಜನರಲ್ ಭಾರತೀಯ ಮೂಲದ ಅಮೆರಿಕ ಪ್ರಜೆ ಪ್ರೀತ್ ಭಾರರಾ ಅವರೂ ಒಳಗೊಂಡಂತೆ 46 ಮಂದಿ ರಾಜೀನಾಮೆಗೆ ಎಜಿ ಮನವಿ ಮಾಢಿದ್ದಾರೆ. ಅಮೆರಿಕದಲ್ಲಿನ ಅಟಾರ್ನಿಗಳ ಸಂಖ್ಯೆ 93. ಇವರಲ್ಲಿ ಬಹುತೇಕ ಮಂದಿ ಈಗಾಗಲೇ ತಮ್ಮ ಸ್ಥಾನಗಳನ್ನು ತೆರವುಗೊಳಿಸಿದ್ದಾರೆ. ನ್ಯಾಯಾಂಗ ಇಲಾಖೆಯನ್ನು ಪುನರ್ರಚಿಸಲು ಮತ್ತು ಏಕರೂಪದ ಪರಿವರ್ತನೆ ಮಾಡುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಲಿದೆ ಎಂದು ನ್ಯಾಯಾಂಗ ಇಲಾಖೆ ವಕ್ತಾರರಾದ ಸರಾ ಇಸ್ಗುರ್ ಫ್ರೋರೆಸ್ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin