ಬರಾಕ್ ಒಬಾಮ ಈಗ ಪರಾವಲಂಬಿ ಜೀವಿ…!

Spread the love

Obama

ಹೌಸ್ಟನ್, ಸೆ.9-ವಿಶ್ವದ ಅತ್ಯಂತ ಶಕ್ತಿಶಾಲಿ ದೇಶದ ಅಧ್ಯಕ್ಷ ಬರಾಕ್ ಒಬಾಮ ಈಗ ಪರಾವಲಂಬಿ ! ಈವರೆಗೆ ಮೀನು, ಜೇಡ, ಡೈನೋಸರಸ್‍ಗೆ ಒಬಾಮ ಹೆಸರನ್ನು ಇಡಲಾಗಿತ್ತು. ಆದರೆ ಈಗ ಒಂದು ಹೊಸ ಪರಾವಲಂಬಿ ಜೀವಿಗೆ ಅಮೆರಿಕ ಅಧ್ಯಕ್ಷರ ಹೆಸರನ್ನು ನಾಮಕರಣ ಮಾಡಲಾಗಿದೆ.   ಅಮೆರಿಕದ ಸಂಶೋಧಕರು ಹೊಸ ಪ್ರಬೇಧದ ಪರಾವಲಂಬಿ ಜೀವಿಯನ್ನು ಕಂಡು ಹಿಡಿದಿದ್ದಾರೆ. ಇದಕ್ಕೆ ಬರಾಕ್‍ಟ್ರೆಮಾ ಒಬಾಮಾಯಿ ಎಂದು ಹೆಸರಿಟ್ಟಿರುವುದಾಗಿ ಪಾರಾಸೈಟೊಲಜಿ ಜರ್ನಲ್‍ನಲ್ಲಿ ತಿಳಿಸಲಾಗಿದೆ. ಈ ನಿಯತಕಾಲಿಕದ ಸಹ ಲೇಖಕ, ಸಂಶೋಧಕ ಮತ್ತು ಒಬಾಮ ಅವರ ಸಹೋದರ ಸಂಬಂಧಿ ಥಾಮಸ್ ಆರ್ ಪ್ಲಾಟ್ ಅವರು ಈ ಪರಾವಲಂಬಿ ಜೀವಿಗೆ ಒಬಾಮ ಎಂಬ ಹೆಸರಿಟ್ಟಿದ್ದಾರೆ. ಅಮೆರಿಕ ಅಧ್ಯಕ್ಷರಿಗೆ ಅವಮಾನ ಮಾಡುವುದು ಇದರ ಉದ್ದೇಶವಲ್ಲ, ಅವರ ಗೌರವಾರ್ಥ ಈ ಹೆಸರನ್ನು ನಾಮಕರಣ ಮಾಡಲಾಗಿದ್ದು, ಇದನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ಮೀನು, ಜೇಡ, ಹಾಗೂ ನಾಮಾವಶೇಷಗೊಂಡಿರುವ ಡೈನೊಸರಸ್‍ಗೆ ಒಬಾಮ ಹೆಸರನ್ನು ನಾಮಕರಣ ಮಾಡಲಾಗಿದೆ. ಹಾಗಾಗಿ ಈ ವಿಶಿಷ್ಟ ಪ್ರಬೇಧದ ಜೀವಿಗೂ ಅಮೆರಿಕ ಅಧ್ಯಕ್ಷರ ಹೆಸರನ್ನು ಇಡುವುದರಲ್ಲಿ ತಪ್ಪೇನಿಲ್ಲ ಎಂದು ಥಾಮಸ್ ಸಮರ್ಥಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin