ಬರ ಪರಿಹಾರ ಕಾಮಗಾರಿಯಲ್ಲಿ ಹಿನ್ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ, ತಹಶೀಲ್ದಾರ್‍ಗೆ ಮನವಿ

kr-nagarಕೆ.ಆರ್.ನಗರ, ಮಾ.10- ರಾಜ್ಯ ಸರ್ಕಾರ ತಾಲೂಕನ್ನು ಬರ ಪೀಡಿತ ಎಂದು ಘೋಷಿಸಿದರೂ ಬರಪರಿಹಾರದ ಯಾವುದೇ ಕಾಮಗಾರಿಗಳನ್ನು ಅಧಿಕಾರಿಗಳು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು. ಪಟ್ಟಣದ ಬಿಜೆಪಿ ಕಛೇರಿಯಿಂದ ವಿವಿ ರಸ್ತೆ ಮೂಲಕ ಮೆರವಣಿಗೆಯಲ್ಲಿ ತೆರಳಿದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಾಲೂಕು ಕಛೇರಿ ಬಳಿ ಕೆಲ ಹೊತ್ತು ಧರಣಿ ನಡೆಸಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ರೈತರ ಸಾಲ ಮನ್ನ ಮಾಡಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಉಸ್ತುವಾರಿ ಮಂತ್ರಿ ಜಿಲ್ಲಾ ಕೇಂದ್ರದಲ್ಲಿ ಮೊಕ್ಕಾಂಹೂಡಿ ಸಮರೋಪಾದಿಯಲ್ಲಿ ಬರಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕೆಂದು ಸೂಚಿಸಿದ್ದಾರೆ.

ಆದರೆ, ಜಿಲ್ಲಾ ಮಂತ್ರಿ ಮಹದೇವಪ್ಪ ತಾಲೂಕಿನಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಯ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೂ ಗೈರು ಹಾಜರಾಗುತ್ತಿದ್ದಾರೆ ಇಂತಹಾ ಸಚಿವರಿಂದ ಬರಪರಿಹಾರದ ಸಮಸ್ಯೆ ಪರಿಹಾರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕೃಷಿ ಅವಲಂಭಿಸಿ ಜೀವನ ನಡೆಸುವುದು ದುಸ್ತರ ಎನ್ನುವ ಭಾವನೆ ರೈತರಲ್ಲಿ ಹೆಚ್ಚಾಗುತ್ತಿದ್ದು ಸರ್ಕಾರ ರೈತ ಕುಟುಂಬಕ್ಕೆ ಆತ್ಮ ವಿಶ್ವಾಸ ಮೂಡಿಸುವ ಕೆಲಸಗಳನ್ನು ಮಾಡುವಲ್ಲಿ ವಿಫಲಗೊಂಡಿದೆ ಎಂದರು.ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಯುವ ಮೋರ್ಚ ಅಧ್ಯಕ್ಷ ಕೆ.ಆರ್.ಚೇತನ್, ಮುಖಂಡರಾದ ಚಂದಗಾಲುಸೋಮು, ಸಣ್ಣಪ್ಪ, ಮಾರ್ಕಂಡಯ್ಯ, ಅರವಿಂದ, ತಮ್ಮಣ್ಣ, ಆನಂದ, ಮೇಲೂರುಕುಮಾರ್, ಬಾಲರಾಜು, ಮುಕೋಟಿ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin