ಬಲೂಚಿಸ್ತಾನದ ಹಡಗು ಒಡೆಯುವ ಕಟ್ಟೆಯಲ್ಲಿ ಭಾರೀ ಸ್ಫೋಟ : 26 ಮಂದಿ ಸಾವು
ಕ್ವೆಟ್ಟಾ, ನ.7- ಬಲೂಚಿಸ್ತಾನದ ಗಡಾನಿ ಯಾರ್ಡ್ನ ಹಡಗು ಒಡೆಯುವ ಕಟ್ಟೆಯಲ್ಲಿ ತೈಲ ಟ್ಯಾಂಕರ್ ನೌಕೆಯೊಂದರಲ್ಲಿ ಶನಿವಾರ ಸಂಭವಿಸಿದ ಭಾರೀ ಸ್ಫೋಟದಿಂದ ಮೃತಪಟ್ಟವರ ಸಂಖ್ಯೆ 26ಕ್ಕೇರಿದ್ದು, ಗಾಯಗೊಂಡ 50 ಜನರ ಸ್ಥಿತಿ ಚಿಂತಾಜನಕವಾಗಿದೆ. ತೈಲ ಸಾಗಿಸುವ ನೌಕೆಯನ್ನು ಒಡೆಯುವ ಕಾರ್ಯದಲ್ಲಿ ತೊಡಗಿದ್ದಾಗ, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈವರೆಗೆ 26 ಮಂದಿ ಬಲಿಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿ ಜಲ್ಫೀಕರ್ ಹಶ್ಮಿ ಹೇಳಿದ್ದಾರೆ. ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸದ ಕಾರಣ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿ ಸುಮಾರು 100 ಮಂದಿ ಗಡಾನಿ-ಕರಾಚಿ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.
ಹಳೆ ಹಡಗುಗಳನ್ನು ಒಡೆಯುವ ಉದ್ಯಮವು ಲಾಭದಾಯವಾಗಿದ್ದು, ಕರಾವಳಿ ಪ್ರದೇಶಗಳಲ್ಲಿ ನೌಕೆಗಳು ಮತ್ತು ಟ್ಯಾಂಕರ್ಗಳನ್ನು ಒಡೆದು ಬಿಡಿಭಾಗಗಳನ್ನು ಮಾರಾಟ ಮಾಡುವ ದಂಧೆ ಹೆಚ್ಚಾಗುತ್ತಿದೆ. ಆದರೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಕಾರ್ಯವು ಅಗಾಗ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.