ಬಸ್ಸಲ್ಲೇ ಮೃತಪಟ್ಟ ತಾಯಿಯ ದೇಹದೊಂದಿಗೆ ಮಗುವನ್ನೂ ಬಸ್ ನಿಂದ ಹೊರಹಾಕಿದ ನೀಚ ಕಂಡಕ್ಟರ್
ಭೂಪಾಲ್, ಆ.28- ಬಸ್ನಲ್ಲಿಯೇ ಮೃತಪಟ್ಟ ಪತ್ನಿಯ ಸಾವಿನ ದುಃಖದಲ್ಲಿದ್ದ ವ್ಯಕ್ತಿಯೊಂದಿಗೆ ಕಂಡಕ್ಟರ್ ಒಬ್ಬ ಅಮಾನವೀಯವಾಗಿ ನಡೆದುಕೊಂಡು, ಸುರಿಯುವ ಮಳೆ ಮಧ್ಯೆಯೇ ವ್ಯಕ್ತಿ ಹಾಗೂ ಆತನ ಮಗುವನ್ನು ಬಸ್ನಿಂದ ಹೊರಹಾಕಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಛತ್ತರ್ ಪುರ್ ಜಿಲ್ಲೆಯ ನಿವಾಸಿಯಾಗಿರುವ ರಾಮ್ ಸಿಂಗ್ ಎಂಬುವವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಬಸ್ವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ರಾಮ್ಸಿಂಗ್ ಅವರ ಪತ್ನಿ ಕೆಲ ದಿನಗಳ ಹಿಂದಷ್ಟೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ 5 ದಿನದ ಮಗುವೊಂದಿಗೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಮಾರ್ಗದ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.
ಈ ವೇಳೆ ಅಮಾನವೀಯವಾಗಿ ನಡೆದುಕೊಂಡಿರುವ ಬಸ್ ಕಂಡಕ್ಟರ್ ಮೃತದೇಹದೊಂದಿಗೆ ಪ್ರಯಾಣ ಮಾಡಲು ಇತರೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕೂಡಲೇ ಮೃತದೇಹದೊಂದಿಗೆ ಕೆಳಗಿಳಿಯುವಂತೆ ಬಲವಂತವಾಗಿ ಮೃತದೇಹದೊಂದಿಗೆ ರಾಮ್ ಸಿಂಗ್ ಮತ್ತು ಆತನ 5 ದಿನಗಳ ಮಗಳನ್ನು ಕೆಳಗಿಳಿಸಿದ್ದಾನೆ.