ಬಸ್‍ನಿಂದ ಬಿದ್ದು ವ್ಯಕ್ತಿ ಸಾವು

Spread the love

man--fall

ಚಿತ್ರದುರ್ಗ,ನ.23- ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನಡೆದಿದೆ. ಚಳ್ಳಕೆರೆ ತಾಲ್ಲೂಕಿನ ರಂಗವ್ವನಹಳ್ಳಿ ಗ್ರಾಮದ ನಿವಾಸಿ ಕೆಂಚಪ್ಪ(24) ಮೃತಪಟ್ಟ ದುರ್ದೈವಿ. ಕೆಂಚಪ್ಪ ತನ್ನ ಹೆಂಡತಿಯೊಂದಿಗೆ ಚಿತ್ರದುರ್ಗಕ್ಕೆ ತೆರಳಿ ಚಳ್ಳಕೆರೆಗೆ ಮರಳುತ್ತಿದ್ದಾಗ ನಿನ್ನೆ ರಾತ್ರಿ 8 ಗಂಟೆ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೆಂಚಪ್ಪ ಬಸ್‍ನ ಬಾಗಿಲ ಬಳಿ ನಿಂತಿದ್ದರು. ಬಸ್ ವೇಗವಾಗಿ ಚಲಿಸುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Sri Raghav

Admin