ಬಹರೈನ್ನಲ್ಲಿ ಗಲಭೆ, 5 ಸಾವು, 286 ಮಂದಿ ಬಂಧನ
ದುಬೈ, ಮೇ 25-ಶಿಯಾ ಧಾರ್ಮಿಕ ಮುಖಂಡರೊಬ್ಬರ ಮೇಲೆ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದನ್ನು ವಿರೋಧಿಸಿ ಬೆಂಬಲಿಗರು ನಡೆಸಿದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್ಗೆ ಐವರು ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ಬಹರೈನ್ನ ಗ್ರಾಮವೊಂದರಲ್ಲಿ ನಡೆದಿದೆ. ರಾಜಧಾನಿ ಮನಾಮ ಬಳಿ ದಿರಜ್ನಲ್ಲಿ ಧಾರ್ಮಿಕ ಮುಖಂಡ ಇಸಾ ಕಾಸಿಂ ಅವರ ಮನೆ ಹೊರಗೆ ಧರಣಿ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಐವರು ಕಾನೂನು ಉಲ್ಲಂಘಕರು ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಲ್ಲುಗಳು, ಮಾರಕಾಸ್ತ್ರಗಳು ಮತ್ತು ದಹನಶೀಲ ಬಾಟಲ್ಗಳನ್ನು ಭದ್ರತಾಪಡೆಗಳತ್ತ ಉದ್ರಿಕ್ತ ಗುಂಪು ಎಸೆಯುತ್ತಿದ್ದಾಗ ಪೊಲೀಸರು ಹಾರಿಸಿದ ಗುಂಡಿಗೆ ಹಲವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘರ್ಷಣೆಯಲ್ಲಿ 19 ಪೊಲೀಸರಿಗೂ ಗಾಯಗಳಾಗಿವೆ. ಒಟ್ಟು 286 ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಅನೇಕರು ಸೆರೆಮನೆಯಿಂದ ತಪ್ಪಿಸಿಕೊಂಡಿದ್ದ ಕೈದಿಗಳಾಗಿದ್ದಾರೆ. ಇವರ ಬಳಿ ಇದ್ದ ಗ್ರೆನೇಡ್ಗಳು ಮತ್ತು ಬಂದೂಕುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.
< Eesanje News 24/7 ನ್ಯೂಸ್ ಆ್ಯಪ್ >