ಬಹುದಿನಗಳ ಕನಸು ನನಸು ನನಸು : ಧಾರವಾಡಕ್ಕೆ ಬಂತು ಐಐಟಿ

Spread the love

IIT-Dharwad

ಧಾರವಾಡ,ಆ28- ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಅಧಿಕೃತ ಉದ್ಘಾಟನೆ ಇಂದು ನಡಯಲಿದ್ದು, ಧಾರವಾಡ ನಗರದ ಹಾಗೂ ಈಡೀ ಉತ್ತರ ಕರ್ನಾಟಕದ ಜನರ ಬಹು ದಿನಗಳ ಕನಸು ಇಂದು ನನಸಾಗಿದೆ.  ನಗರದ ವಾಲ್ಮಿ ಕಟ್ಟಡದ ತಾತ್ಕಾಲಿಕ ಕ್ಯಾಂಪಸ್ನಲ್ಲಿ ಸಂಸ್ಥೆ ಕಾರ್ಯದ ನಿರ್ವಹಿಸಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡಕರ್ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.  ಜುಲೈ 28ರಂದೇ ಐಐಟಿ ಉದ್ಘಾಟನೆಯ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಮಹದಾಯಿ ನದಿ ನೀರಿಗಾಗಿ ಪ್ರತಿಭಟನೆ ಹೆಚ್ಚಾಗಿದ್ದರಿಂದ ಕಾರ್ಯರಕ್ರಮವನ್ನು ಧಿಡೀರ್ ಮುಂದೂಡಲಾಗಿತ್ತು.

ತರಗತಿಗಳು ಮಾತ್ರ ನಿಗದಿಯಂತೆ ಆಗಸ್ಟ್1ರಿಂದಲೇ ಆರಂಭವಾಗಿವೆ. ಈ ವರ್ಷ 120 ವಿದ್ಯಾರ್ಥಿಗಳು ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ. ಇದರಲ್ಲಿ 17ಮಂದಿ ಕರ್ನಾಟಕದವರಿದ್ದಾರೆ.
ಐಐಟಿ ಬಾಂಬೆ ಸಹಕಾರದಿಂದ ಕಾರ್ಯದನಿರ್ವಹಲಿರುವ ಐಐಟಿ ಧಾರವಾಡಕ್ಕೆ ಕನ್ನಡದವರೇ ಆದ ಪ್ರೊ.ನಾರಾಯಣ ಪುಣೇಕರ್ ಆಡಳಿತಾಧಿಕಾರಿಯಾಗಿದ್ದಾರೆ. ಆರಂಭದಲ್ಲಿ ಕಂಪ್ಯೂಟರ್-ವಿಜ್ಞಾನ ಎಲೆಕ್ಟ್ರಾನಿಕ್ ಹಾಗೂ ಮೆಕ್ಯಾನಿಕಲ್ ವಿಭಾಗಳನ್ನು ಇಲ್ಲಿ ಆರಂಭಸಲಾಗಿದೆ.

ಜೋಶಿ, ಬೆಲ್ಲದ, ಪರಿಶ್ರಮ:

ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಸಂಸದ ಪ್ರಹ್ಲಾದ್ ಜೋಶಿ ಮತ್ತು ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರ ಕೊಡುಗೆ ಅಪಾರವಾಗಿದೆ. ಕಳೆದ ಹಲವಾರು ದಿನಗಳಿಂದ ಐಐಟಿ ಸ್ಥಾಪನೆಗೆ ಇವರಿಬ್ಬರೂ ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ಧಾರವಾಕ್ಕೆ ಐಐಟಿ ಸಿಗುವ ಹಾಗೆ ಪ್ರಯತ್ನಿಸಿರುವುದು ಸ್ವಾಗತಾರ್ಹ. ಅಂದಿನ ಮಾನವ ಸಂಪನ್ಮೂಲ ಚಿವ ಇರಾನಿ ಅವರ ಮೇಲೆ ಒತ್ತಡ ತರುವಲ್ಲಿ ಇವರಿಬ್ಬರೂ ಯಶಸ್ವಿಯಾಗಿದ್ದಾರೆ. ರಾಯಚೂರಲ್ಲಿ ಐಐಟಿ ಸ್ಥಾಪನೆಗೆ ಎಲ್ಲ ಕಡೆಯಿಂದ ಒತ್ತಡ ಬಂದಿದ್ದರೂ ಸಹ ಜೋಶಿ ಹಾಗೂ ಬೆಲ್ಲದ ಅವರು ಕೇಂದ್ರದ ಮನವೊಲಿಸಿ ಕೇಂದ್ರವನ್ನು ಧಾರವಾಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು.

► Follow us on –  Facebook / Twitter  / Google+

Facebook Comments

Sri Raghav

Admin