ಬಹುಭಾಷಾ ನಟಿ ಭಾವನಾ ಕಿಡ್ನಾಪ್, ಕಾರಿನಲ್ಲೇ ಲೈಂಗಿಕ ಕಿರುಕುಳ

Spread the love

Bhavana--01

ತಿರುವನಂತಪುರಂ,ಫೆ.18-ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ, ಪವರ್ ಸ್ಟಾರ್ ಪುನೀತ್ ಜೊತೆ ಜಾಕಿ ಮತ್ತು ರೋಮಿಯೋ ಸೇರಿದಂತೆ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಮಲೆಯಾಳಿ ನಟಿ ಭಾವನಾ ಅವರನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ನಡೆದಿದೆ. ಕೇರಳದ ಎರ್ನಾಕುಲಂನಲ್ಲಿ ಈ ಘಟನೆ ನಡೆದಿದ್ದು , ಭಾವನಾ ಅವರನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ತಿಳಿದುಬಂದಿದ್ದು , ಪೊಲೀಸರು ಈಗಾಗಲೇ ಒಬ್ಬ ದುಷ್ಕರ್ಮಿಯನ್ನು ಬಂಧಿಸಿದ್ದಾರೆ.   ಇನ್ನೊಬ್ಬ ಅಪಹರಣಕಾರನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಂಧಿತ ದುಷ್ಕರ್ಮಿಯನ್ನು ಸುನೀಲ್‍ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಎಂದು ಗುರುತಿಸಲಾಗಿದೆ. ಭಾವನಾ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮಲೆಯಾಳಂ ಚಿತ್ರರಂಗ ದಿಗ್ಭ್ರಮೆ ವ್ಯಕ್ತಪಡಿಸಿದೆ.

ಮಲೆಯಾಳಂ ಸೇರಿದಂತೆ ಇತರ ಭಾಷೆಗಳಲ್ಲೂ ನಟಿಸಿ ಹೆಸರು ಮಾಡಿರುವ ಭಾವನಾರ ಸುರಕ್ಷತೆಗಾಗಿ ಚಿತ್ರರಂಗದ ಗಣ್ಯರು, ನಟರು, ಮತ್ತಿತರರು ಆಗ್ರಹಿಸಿದ್ದಾರೆ.   ಸಾರ್ವಜನಿಕರು ಭಾವನಾ ಅವರ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin