ಬಾಂಗ್ಲಾದೇಶದ ಸಂಸದರೊಬ್ಬರನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು
ಢಾಕಾ, ಜ.2- ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಬಾಂಗ್ಲಾದೇಶ ಸಂಸದರೊಬ್ಬರು ಬಲಿಯಾದ ಘಟನೆ ನಿನ್ನೆ ಗಾಯಿಬಾಡಾ ಜಿಲ್ಲೆಯಲ್ಲಿ ನಡೆದಿದೆ. ಆಡಳಿತ ಪಕ್ಷ ಅವಾಮಿ ಲೀಗ್ನ ಸಂಸದ ಮಂಜಾರುಲ್ ಇಸ್ಲಾಂರ ಮೇಲೆ ಹಂತಕರು ಗುಂಡು ಹಾರಿಸಿ ಕೊಂದು ಪರಾರಿಯಾಗಿದ್ದಾರೆ. ಗಾಯಿಬಾಡಾನಲ್ಲಿರುವ ಸಂಸದರ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳ ತಂಡ ಅವರ ಮೇಲೆ ಗುಂಡಿನ ಸುರಿಮಳೆಗರೆದು ಬೈಕ್ಗಳಲ್ಲಿ ಪರಾರಿಯಾಗಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ. ಹಂತಕರ ಪತ್ತೆಗೆ ಪೆÇಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.