ಬಾಂಗ್ಲಾ ತಂಡಕ್ಕೆ ವಾಲ್ಷ್ ಬೌಲಿಂಗ್ ಕೋಚ್

County-wolr

ಸೆಂಟ್‌ಜಾನ್ಸ್ , ಸೆ. 1- ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಬೌಲರ್ ಕಂಟ್ರಿ ವಾಲ್ಷ್ ಅವರನ್ನು ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ಸದಸ್ಯರು ಆಯ್ಕೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ವಾಲ್ಷ್ , ನಾನು ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿರುವು ದರಿಂದ ತುಂಬಾ ಥ್ರಿಲ್ ಆಗಿದ್ದೇನೆ, ಆ ತಂಡದಲ್ಲಿ ಉತ್ತಮ ಸಾಮರ್ಥ್ಯವಿರುವ ಆಟಗಾರರಿ ದ್ದಾರೆ ಎಂದರು. ನಿರ್ಗಮಿತ ಕೋಚ್ ಚಂದಿಕಾ ಅತುರ್‌ಸಿಂಘ್ ಅವರು ಬಾಂಗ್ಲಾ ತಂಡದಲ್ಲಿ ಉತ್ತಮ ಬೌಲರ್‌ಗಳನ್ನು ಹುಟ್ಟು ಹಾಕಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಬೋಲಿಂಗ್ ಕೋಚ್ ಹುದ್ದೆಯನ್ನು ಅಕೃತವಾಗಿ ಅಲಂಕರಿಸಲಿರುವ ವಾಲ್ಷ್ 17 ವರ್ಷಗಳ ಕ್ರಿಕೆಟ್ ಜೀವನದಲ್ಲಿ 132 ಟೆಸ್ಟ್ ಪಂದ್ಯಗಳಿಂದ 519 ವಿಕೆಟ್ ಹಾಗೂ 205 ಏಕದಿನ ಪಂದ್ಯಗಳಲ್ಲಿ 227 ವಿಕೆಟ್‌ಗಳನ್ನು ಗಳಿಸಿರುವುದೇ ಅಲ್ಲದೆ 1987ರಲ್ಲಿ ವಿಸ್ಡನ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

► Follow us on –  Facebook / Twitter  / Google+

Sri Raghav

Admin