ಬಾಂಧವ್ಯ ಬಲವರ್ಧನೆಗೆ ಟ್ರಂಪ್-ಪುಟಿನ್ ಮಹತ್ವದ ಸಮಾಲೋಚನೆ
ವಾಷಿಂಗ್ಟನ್/ಮಾಸ್ಕೋ, ನ.15-ಉಭಯ ದೇಶಗಳ ಮಧ್ಯೆ ತಲೆದೋರಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬಾಂಧವ್ಯ ಬಲಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಜಗತ್ತಿನ ಎರಡು ಪ್ರಬಲ ದೇಶಗಳ ನಾಯಕರು ದೂರವಾಣಿ ಮೂಲಕ ಇದೇ ಮೊದಲ ಬಾರಿಗೆ ಸಂಭಾಷಣೆ ನಡೆಸಿದರು. ಎರಡೂ ರಾಷ್ಟ್ರಗಳ ನಡುವೆ ತಲೆದೋರಿರುವ ಬಿಕ್ಕಟ್ಟುಗಳನ್ನು ಉಪಶಮನಗೊಳಿಸಿ ಹೊಸ ಬಾಂಧವ್ಯ ವೃದ್ಧಿಗಾಗಿ ಜಂಟಿಯಾಗಿ ಕಾರ್ಯನಿರ್ವಹಿಸಲು ಚರ್ಚಿಸಿ ಪರಸ್ಪರ ಸಮ್ಮತಿ ಸೂಚಿಸಿದರು. ಐತಿಹಾಸಿಕ ಗೆಲುವು ಸಾಧಿಸಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ಗೆ ಶುಭಕೋರಿದ ಪುಟಿನ್, ಎರಡೂ ದೇಶಗಳ ನಡುವೆ ವಿವಿಧ ವಿಷಯಗಳಲ್ಲಿ ಉಂಟಾಗಿರುವ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಟ್ರಂಪ್, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚಾರಿತ್ರಿಕ ಸಂಬಂಧ ವೃದ್ದಿಯ ಹೊಸ ಶಖೆ ಅರಂಭಕ್ಕೆ ಕೈಜೋಡಿಸುವ ಭರವಸೆ ನೀಡಿದರು.
► Follow us on – Facebook / Twitter / Google+