ಬಾಂಬ್ ನಾಗ ಎಸ್ಕೇಪ್ ಆಗಲು ನೆರವಾದ ಸಿಸಿ ಕ್ಯಾಮೆರಾಗಳು
ಬೆಂಗಳೂರು,ಏ.14-ಪೊಲೀಸರ ಸರ್ಪಗಾವಲಿನ ನಡುವೆಯೂ ಬಾಂಬ್ ನಾಗ ಪರಾರಿಯಾಗಲು ನೆರವಾದದ್ದೇ ಈ ಸಿಸಿ ಕ್ಯಾಮೆರಾಗಳು… ಬಾಂಬ್ ನಾಗ ತನ್ನ ಮನೆ ಹಾಗೂ ಅಕ್ಕಪಕ್ಕದ ನಿವಾಸಗಳ ಮೇಲೆ ಸರಿಸುಮಾರು 36 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾನೆ. ಈತ ವಾಸಿಸುತ್ತಿರುವ ಪ್ರದೇಶದ ಸುತ್ತಮುತ್ತ ಖಾಕಿ ವಾಸನೆ ಕಂಡುಬಂದರೂ ಅದು ಬಾಂಬ್ ನಾಗನ ಮೂಗಿಗೆ ತಲುಪುತ್ತದೆ. ಹೀಗಾಗಿಯೇ ಬೆಳ್ಳಂಬೆಳಗ್ಗೆ ಸುಮಾರು 50ಕ್ಕೂ ಹೆಚ್ಚು ಪೊಲೀಸರು ಬಾಂಬ್ ನಾಗನ ನಿವಾಸದ ಮೇಲೆ ದಾಳಿ ಮಾಡಿದಾಗಲೂ ಆತ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ಈತನ ಪರಾರಿಗೆ ನೆರವಾದದ್ದೇ ಈ ಸಿಸಿ ಕ್ಯಾಮೆರಾಗಳು. ಪೊಲೀಸರು ತನ್ನ ಮನೆಯನ್ನು ಸುತ್ತುವರಿದಿರುವುದನ್ನು ಸಿಸಿ ಕ್ಯಾಮೆರಾದಲ್ಲಿ ವೀಕ್ಷಿಸಿದ ನಾಗ ಪೊಲೀಸರಿಲ್ಲದ ಪ್ರದೇಶವನ್ನು ಸಿಸಿ ಕ್ಯಾಮೆರಾದಲ್ಲೇ ಪತ್ತೆಹಚ್ಚಿ ಕಟ್ಟಡ ಜಿಗಿದು ಪರಾರಿಯಾಗಿದ್ದಾನೆ.
< Eesanje News 24/7 ನ್ಯೂಸ್ ಆ್ಯಪ್ >