ಬಾತ್ ರೂಮ್, ಬೆಡ್‍ರೂಂಗಳಲ್ಲಿ ಇಣುಕುತ್ತಿದ್ದ ವಿಕೃತಕಾಮಿಗೆ ಪೊಲೀಸರ ಶೋಧ

Umesh-Reddy

ಬೆಂಗಳೂರು, ಮಾ.17- ಬೆಮೆಲ್ ಲೇಔಟ್‍ನಲ್ಲಿ ಕಾಣಿಸಿಕೊಂಡಿದ್ದ ವಿಕೃತ ಕಾಮಿಗಾಗಿ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಿಇಎಂಎಲ್ ಲೇಔಟ್ 5ನೆ ಹಂತದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸಿಕೊಂಡಿದ್ದ ವಿಕೃತ ಕಾಮಿಯೊಬ್ಬ ರಾತ್ರಿ ವೇಳೆ ಮನೆಗಳ ಸ್ನಾನ ಗೃಹ, ಬೆಡ್‍ರೂಂಗಳಲ್ಲಿ ಇಣುಕುತ್ತಿದ್ದ. ಈ ಬಗ್ಗೆ ಅಲ್ಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದರೂ ವಿಕೃತ ಕಾಮಿ ಪತ್ತೆಯಾಗಿರಲಿಲ್ಲ.

ಕಳೆದ ಎರಡು ದಿನಗಳಿಂದ ಮತ್ತೆ ವಿಕೃತಕಾಮಿ ಕಾಣಿಸಿಕೊಂಡಿ ದ್ದಾನೆ ಎಂಬ ವದಂತಿ ಹಬ್ಬಿದ್ದು, ಪೊಲೀಸರು ಆತನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.  ಕೃತಕಾಮಿ ಉಮೇಶ್ ರೆಡ್ಡಿ ಸಿಕ್ಕಿಬಿದ್ದು ಜೈಲು ಪಾಲಾದ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಮಹಿಳೆಯರು ಮತ್ತೊಬ್ಬ ವಿಕೃತಕಾಮಿಯ ಭಯದ ನೆರಳಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin