ಬಾನಂಗಳದಲ್ಲಿನ ಕಬ್ಬಕ್ಕಿಗಳ ನೃತ್ಯ ಚಿತ್ತಾರವನ್ನೊಮ್ಮೆ ಮಿಸ್ ಮಾಡ್ದೆ ಕಣ್ತುಂಬಿಕೊಳ್ಳಿ

ds-5

ಇದು ಇಸ್ರೇಲ್‍ನ ಬಾನಂಗಳದಲ್ಲಿ ನಡೆದ ವಿಸ್ಮಯ ಸಂಗತಿ. ಸಹಸ್ರಾರು ಸ್ಟಾರ್ಲಿಂಗ್‍ಗಳು ಅಥವಾ ಕಬ್ಬಕ್ಕಿಗಳು ಒಟ್ಟಿಗೆ ಗಗನದಲ್ಲಿ ಹಾರುತ್ತಾ ಕ್ಷಣಕ್ಕೊಂದು ಚಿತ್ತಾರ ಬಿಡಿಸಿ ನೋಡುಗರ ಕಣ್ಮನ ಸೆಳೆದವು. ಈ ಕಪ್ಪು ಪಕ್ಕಿಗಳು ಬಾನಂಗಳದಲ್ಲಿ ಗುಂಪುಗುಂಪಾಗಿ ಹಾರಿ ದಿಕ್ಕು ಬದಲಿಸಿದಂತೆ ಅನೇಕಾನೇಕ ಚಿತ್ರಗಳು ಆಗಸದ ಕ್ಯಾನ್ವಾಸ್ ಮೇಲೆ ಮೂಡಿ ಬಂದವು. ಬನ್ನಿ ಕಬ್ಬಕ್ಕಿಗಳ ನೃತ್ಯ ಚಿತ್ತಾರವನ್ನು ನಾವೂ ನೋಡೋಣ..

ds-6

ದಕ್ಷಿಣ ಇಸ್ರೇಲ್‍ನಲ್ಲಿ ಪ್ರತಿ ಚಳಿಗಾಲದಲ್ಲಿ ವಿಸ್ಮಯಕಾರಿ ವಿದ್ಯಮಾನ ನಡೆಯುತ್ತದೆ. ರಷ್ಯಾ ಮತ್ತು ಪೂರ್ವ ಯುರೋಪ್ ದೇಶಗಳಿಂದ ಇಲ್ಲಿಗೆ ವಲಸೆ ಬರುವ ಸಹಸ್ರಾರು ಸ್ಟಾರ್ಲಿಂಗ್ ಅಥವಾ ಕಬ್ಬಕ್ಕಿಗಳು ಒಟ್ಟಿಗೆ ಬಾನಿನಲ್ಲಿ ಹಾರಿದಾಗ ಕಂಡುಬರುವ ದೃಶ್ಯ ಚೇತೋಹಾರಿ..

ds-4

ಕಪ್ಪು ಪಕ್ಷಿಗಳು ಸಹಸ್ರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ಬಾನಂಗಳದಲ್ಲಿ ಹಾರುತ್ತವೆ. ಹಾಗೆಯೇ ಕ್ಷಣಕ್ಕೊಮ್ಮೆ ದಿಕ್ಕು ಮತ್ತು ಚಲನೆ ಬದಲಿಸಿದಂತೆ ಅನೇಕಾನೇಕ ಚಿತ್ರ-ಆಕಾರಗಳು ಆಗಸದಲ್ಲಿ ಮೂಡುತ್ತವೆ. ಇದು ಕಬ್ಬಕ್ಕಿಗಳು ಆಗಸದ ಕ್ಯಾನ್ವಸ್ ಮೇಲೆ ಬಿಡಿಸುವ ನೃತ್ಯ ಚಿತ್ತಾರದ ಕಲಾ ದೃಶ್ಯ ವೈಭವ…
ಕಬ್ಬಕ್ಕಿಗಳ ಈ ಸಮೂಹ ಗಗನಾರೋಹಣ ಮತ್ತು ಅವರೋಹಣದ ವಿವಿಧ ಆಕಾg ಗಳನ್ನು ಕಂಡು ಆಕ್ರಮಣಕಾರಿ ದೊಡ್ಡ ದೊಡ್ಡ ಗಿಡುಗಗಳು ಮತ್ತು ರಣಹದ್ದುಗಳೇ ತೆಪ್ಪಗಾಗುತ್ತವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ತತ್ವವನ್ನು ಈ ಪಕ್ಷಿಗಳು ಸಾರುವಂತೆ ಭಾಸವಾಗುತ್ತದೆ.  ಇಷ್ಟು ಸಂಖ್ಯೆಯ ಪಕ್ಷಿಗಳ ಗಗನ ಲೀಲಾ ವಿನೋದ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತವೆ.

ds-3

ಇಪ್ಪತ್ತು ವರ್ಷಗಳ ಹಿಂದೆ ಇಸ್ರೇಲ್‍ಗೆ ಲಕ್ಷಾಂತರ ಸಂಖ್ಯೆಯಲ್ಲಿ ಸ್ಟಾರ್ಲಿಂಗ್‍ಗಳು ವಲಸೆ ಬರುತ್ತಿದ್ದವು. ಇಸ್ರೇಲ್‍ನ ನೆಗೆವ್ ಮರುಭೂಮಿ ಪ್ರದೇಶ ಚಳಿಗಾಲದಲ್ಲಿ ಬೆಚ್ಚಗಿರುವ ಕಾರಣಕ್ಕೆ ರಷ್ಯಾ ಮತ್ತು ಐರೋಪ್ಯ ಖಂಡ ಇತರ ದೇಶಗಳಿಂದ ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಿದ್ದವು. ಆದರೆ ಕೆಲವು ವರ್ಷಗಳಿಂದ ಇವುಗಳ ಸಂಖ್ಯೆ ಗಮನಾರ್ಹವಾಗಿ ಇಳಿದಿದೆ. ಲಕ್ಷಾಂತರ ಸಂಖ್ಯೆಗಳ ಬದಲಿಗೆ ಸಹಸ್ರಾರು ಕಬ್ಬಕ್ಕಿಗಳು ಮಾತ್ರ ಇಲ್ಲಿಗೆ ಬರುತ್ತಿವೆ. ಈ ಸಂಖ್ಯೆ ಇಳಿಮುಖವಾಗಲು ಕಾರಣ ನಿಗೂಢವಾಗಿದೆ.

ds-1

Sri Raghav

Admin