ಬಾಬರಿ ಮಸೀದಿ ದ್ವಂಸ ಪ್ರಕರಣ : ಅಡ್ವಾಣಿ ಸೇರಿ ಬಿಜೆಪಿಯ 10 ನಾಯಕರಿಗೆ ಸಂಕಷ್ಟ

Advani-Babri--01

ನವದೆಹಲಿ, ಏ.19-ಕೋಮುಗಲಭೆಗೆ ಕಾರಣವಾಗಿದ್ದ ಆಯೋಧ್ಯೆಯ ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಧುರೀಣ ಎಲ್.ಕೆ.ಅಡ್ವಾಣಿ ಮತ್ತು ಇತರೆ ನಾಯಕರ ವಿರುದ್ಧದ ಕ್ರಿಮಿನಲ್ ಸಂಚು ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಇಂದು ಸಮ್ಮತಿಸಿದೆ. ಇದರಿಂದಾಗಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಮತ್ತು ಇತರೆ 10 ನಾಯಕರಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣ ಕುರಿತು ಮರು ವಿಚಾರಣೆನಡೆಸಬೇಕೆಂದು ಸಿಬಿಐ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠ ಎಲ್.ಕೆ.ಅಡ್ವಾಣಿ, ಬಿಜೆಪಿ ನಾಯಕರಾದ ಡಾ.ಮುರಳೀಮನೋಹರ ಜೋಷಿ, ಉಮಾಭಾರತಿ, ವಿನಯ್‍ಕಟಿಯಾರ್ ಸೇರಿದಂತೆ ಹತ್ತು ನಾಯಕರು ಹಾಗೂ ಕರಸೇವಕರ ವಿರುದ್ಧ ವಿಚಾರಣೆ ನಡೆಸಲು ತೀರ್ಪು ನೀಡಿತು.ಅಲ್ಲದೆ, ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಪ್ರಕರಣಗಳನ್ನು ಜಂಟಿಯಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ.  ಒಟ್ಟು ಎರಡು ಪ್ರಕರಣಗಳಿದ್ದು, ಮೊದಲನೆಯದ್ದರಲ್ಲಿ ಅನಾಮಧೇಯ ಕರಸೇವಕರ ವಿರುದ್ಧ ಸಲ್ಲಿಸಲಾಗಿರುವ ಪ್ರಕರಣ ಮತ್ತು ಅಡ್ವಾಣಿ ಸೇರಿದಂತೆ ಇತರೆ ಗಣ್ಯರ ವಿರುದ್ಧದ ವಿಚಾರಣೆಯನ್ನು ರಾಯ್‍ಬರೇಲಿ ಕೋರ್ಟ್‍ನಿಂದ ಲಕ್ನೋಗೆ ವರ್ಗಾಯಿಸುವ ಬಗ್ಗೆಯೂ ನ್ಯಾಯಪೀಠ ತೀರ್ಮಾನಿಸಿದೆ.

ಈ ಪ್ರಕರಣಗಳನ್ನು ಲಕ್ನೋ ನ್ಯಾಯಾಲಯ ದಿನಬಿಟ್ಟು ದಿನ ವಿಚಾರಣೆಗೆ ಒಳಪಡಿಸುವಂತೆ ಹಾಗೂ ಪ್ರಕರಣಗಳನ್ನು ಮುಂದೂಡದಂತೆ ನ್ಯಾಯಪೀಠ ಸೂಚಿಸಿತು. ಅಲ್ಲದೆ, ವಿಚಾರಣೆ ನಡೆಸುವ ನ್ಯಾಯಾಧೀಶರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಎರಡು ವರ್ಷಗಳಲ್ಲಿ ಈ ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕೆಂದು ಆದೇಶ ನೀಡಿದೆ. ಅಡ್ವಾಣಿ ಸೇರಿದಂತೆ 13 ನಾಯಕರ ವಿರುದ್ಧ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಕ್ರಿಮಿನಲ್ ಸಂಚು ಆರೋಪಗಳನ್ನು ಈ ಹಿಂದೆ ವಜಾಗೊಳಿಸಲಾಗಿತ್ತು. ಈ ಪ್ರಕರಣವನ್ನು ಮತ್ತೆ ವಿಚಾರಣೆಗೆ ಒಳಪಡಿಸಬೇಕೆಂದು ಸಿಬಿಐ ನ್ಯಾಯಾಲಯ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.   ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಮತ್ತೆ ಜೀವ ಬಂದಿರುವ ಹಿನ್ನೆಲೆಯಲ್ಲಿ ಅಡ್ವಾಣಿ ಸೇರಿದಂತೆ ಬಿಜೆಪಿ ಧುರೀಣರು ಈಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin