ಬಾಲಿವುಡ್ ಹೊಸ ಪ್ರಾಜೆಕ್ಟ್’ನಲ್ಲಿ ಪಿಂಕಿ

Priyanka-1

ಅಮೆರಿಕನ್ ಟಿವಿ ಸಿರಿಯಲ್ ಮತ್ತು ಬಾಲಿವುಡ್ ಸಿನಿಮಾ (ಬೇವಾಚ್) ಮೂಲಕ ಯಶಸ್ವಿನ ಉತ್ತುಂಗದಲ್ಲಿರುವ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಶೀಘ್ರದಲ್ಲೇ ಹಿಂದಿ ಚಿತ್ರರಂಗಕ್ಕೆ ಹಿಂದಿರುಗುವ ಸೂಚನೆ ನೀಡಿ ಅಭಿಮಾನಿಗಳನ್ನು ಚಕಿತಗೊಳಿಸಿದ್ದಾಳೆ. ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಪ್ರಾಜೆಕ್ಟ್‍ನಲ್ಲಿ ಪಿಗ್ಗಿ ನಟಿಸುವುದು ಬಹುತೇಕ ಖಚಿತವಾಗಿದೆ. ಪ್ರಸಿದ್ಧ ಕವಿ ಸಾಹಿರ್ ಲೂಧಿಯಾನ್ವಿ ಜೀವನಗಾಥೆ ಕುರಿತ ಚಿತ್ರದಲ್ಲಿ ಪಿಸಿ ಬಾಲಿವುಡ್ ಸೂಪರ್‍ಸ್ಟಾರ್ ಶಾರುಕ್ ಖಾನ್ ಜೊತೆ ನಟಿಸಲಿದ್ದಾಳೆ ಎಂಬ ವರದಿಗಳಿವೆ. ಆದಾಗ್ಯೂ ಈಕೆ ಬಾಲಿವುಡ್ ಹೊಸ ಪ್ರಾಜೆಕ್ಟ್‍ಗೆ ಸಹಿ ಮಾಡಿಲ್ಲ. ಹೊಸ ಸಿನಿಮಾದಲ್ಲಿ ನಟಿಸಲು ಸಂಜಯ್ ಬನ್ಸಾಲಿ ಅವರಿಂದ ನನಗೆ ಆಹ್ವಾನ ಬಂದರೆ ನಾನು ತಿರಸ್ಕರಿಸಲಾರೆ ಎಂದು ಪ್ರಿಯಾಂಕಾ ಹೇಳುವ ಮೂಲಕ ತಮ್ಮ ಮುಂದಿನ ಪ್ರಾಜೆಕ್ಟ್ ಬಾಲಿವುಡ್ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾಳೆ.

ನಾನು ಯಾವುದೇ ಸಿನಿಮಾ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆದರೆ ಸಂಜಯ್ ಸಾರ್ ನಟಿಸುವಂತೆ ಹೇಳಿದರೆ ನಾನು ಒಲ್ಲೆ ಎನ್ನಲಾರೆ. ಪ್ರತಿ ಬಾರಿ ನಾವು ಭೇಟಿಯಾದಾಗಲೂ ಹೊಸ ಪ್ರಾಜೆಕ್ಟ್ ಬಗ್ಗೆಯೇ ಮಾತನಾಡುತ್ತೀವೆ. ಹೀಗಾಗಿ ನಮ್ಮ ಸಂಯೋಜನೆಯಲ್ಲಿ ಹೊಸ ಯೋಜನೆ ರೂಪುಗೊಳ್ಳಲಿದೆ ಎಂದು ಪಿಂಕಿ ಹೇಳುತ್ತಾಳೆ. ಭಾರತ ಮತ್ತು ಅಮೆರಿಕದಲ್ಲಿ ಪಿಂಕಿ ಬಳಿಗೆ ಸಾಕಷ್ಟು ಸ್ಕ್ರಿಪ್ಟ್‍ಗಳು ಬಂದಿದ್ದವು. ಬಿಡುವು ಮಾಡಿಕೊಂಡು ಅವುಗಳನ್ನೆಲ್ಲಾ ನೋಡಿದ್ದಾಳೆ. ಆದರೂ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಬಹುಶ: ಆಕೆಯ ಮುಂದಿನ ಹೆಜ್ಜೆ ಬಾಲಿವುಡ್ ಎಂಬುದು ಬಹುತೇಕ ಖಚಿತವಾಗಿದೆ. ಇದು ತಾಯ್ನಾಡಿನ ಪಿಗ್ಗಿ ಅಭಿಮಾನಿಗಳಿಗೆ ಸಂತಸದ ಸಂಗತಿಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin