ಬಾಹ್ಯಾಕಾಶ ವಿಜ್ಞಾನದಲ್ಲಿ ಪಿಇಎಸ್ ವಿದ್ಯಾರ್ಥಿಗಳ ಸಾಧನೆ ಉತ್ತುಂಗಕ್ಕೆ

PES

ಬೆಂಗಳೂರು, ಸೆ.26-ಪಿಎಎಸ್ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಇಂದು ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ದಿನ.. ಪಿಇಎಸ್ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ 250 ವಿದ್ಯಾರ್ಥಿಗಳು ನಿರ್ಮಿಸಿರುವ ಪಿಸ್ಯಾಟ್ ಶೈಕ್ಷಣಿಕ ಉಪಗ್ರಹವು ಇಂದು ನಭಕ್ಕೆ ಯಶಸ್ವಿಯಾಗಿ ಚಿಮ್ಮಿ ಬೆಂಗಳೂರು ನಗರದ ಶೈಕ್ಷಣಿಕ ಸಾಧನೆಯ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡ್ಯೊಯ್ದಿದೆ.  ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಿಗ್ಗೆ 9.12ರಲ್ಲಿ ಯಶಸ್ವಿಯಾಗಿ ಉಡ್ಡಯನವಾದ ಪಿಎಸ್‍ಎಲ್‍ವಿ-35 ರಾಕೆಟ್‍ನಲ್ಲಿದ್ದ ಎಂಟು ಉಪಗ್ರಹಗಳಲ್ಲಿ ಎರಡು ಶೈಕ್ಷಣಿಕ ಉಪಗ್ರಹಗಳೂ ಇವೆ. ಇವುಗಳಲ್ಲಿ 5 ಕಾಲೇಜುಗಳ 250 ವಿದ್ಯಾರ್ಥಿಗಳು ನಿರ್ಮಿಸಿರುವ ಪಿಸ್ಯಾಟ್ ಉಪಗ್ರಹವೂ ಸೇರಿರುವುದು ಭಾರತದ ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಹೆಮ್ಮೆ ಸಂಗತಿಯಾಗಿದೆ. ಇದು ಕೂಡ ಒಂದು ಐತಿಹಾಸಿಕ ಸಾಧನೆ.

ಪಿಸ್ಯಾಟ್-ನ್ಯಾನೋಸ್ಯಾಟಲೈಟ್‍ನನ್ನು (ಪುಟ್ಟ ಉಪಗ್ರಹ) ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ. ಏಕಕಾಲದಲ್ಲಿ ಎಂಟು ಉಪಗ್ರಹಗಳೊಂದಿಗೆ ಪಿಸ್ಯಾಟ್ ಯಶಸ್ವಿಯಾಗಿ ನಭಕ್ಕೆ ಜಿಗಿಯುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಿರ್ದೇಶಕ ಮೈಲ್‍ಸ್ವಾಮಿ ಅಣ್ಣಾದುರೈ ವಿದ್ಯಾರ್ಥಿಗಳು ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್. ದೊರೈಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿ ಇದೊಂದು ಅತ್ಯಂತ ವಿಶೇಷ ದಿನ ಎಂದು ಬಣ್ಣಿಸಿದರು. ಬಹುದಿನಗಳಿಂದಲೇ ಪಿಇಎಸ್ ಯೂನಿವರ್ಸಿಟಿ ಕ್ಯಾಂಪಸ್‍ನಲ್ಲಿ ನಡೆಯುತ್ತಿದ್ದ ಎಸ್-ಬ್ಯಾಂಡ್ ಗ್ರೌಂಡ್ ಸ್ಟೇಷನ್ ತಂತ್ರಜಜ್ಞಾನದ ಕಾರ್ಯ ಇಂದು ಫಲ ನೀಡಿದೆ.

ಭಾರತೀಯ ಶೈಕ್ಷಣಿಕ ಸಂಸ್ಥೆ ಮತ್ತು ಪಿಸ್ಯಾಟ್ ಒಳಗೊಂಡ ಉಪಗ್ರಹಗಳನ್ನು 689 ಕಿ.ಮೀ.ದೂರದಲ್ಲಿರುವ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೈಲ್‍ಸ್ವಾಮಿ ಅಣ್ಣದುರೈ ಹೇಳಿದ್ದಾರೆ.

► Follow us on –  Facebook / Twitter  / Google+

Sri Raghav

Admin