ಬಿಎಂಟಿಸಿ ಬಸ್‍ಗೆ ಬಲಿಯಾದ ಸ್ವೀಗಿ ಡಿಲಿವರಿ ಬಾಯ್

Spread the love

Accident--02

ಬೆಂಗಳೂರು, ಜೂ.24- ಬಿಎಂಟಿಸಿ ಬಸ್‍ಗೆ ಸಿಕ್ಕಿ ಡಿಲಿವರಿಬಾಯ್ ಒಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಶಂಕರಮಠ ವೃತ್ತದಲ್ಲಿ ನಡೆದಿದೆ. ಸ್ವೀಗಿ ಕಂಪೆನಿಯಲ್ಲಿ ಫುಡ್ ಡಿಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ದೇವರಾಜ್(25) ಮೃತ ಯುವಕನಾಗಿದ್ದು, ಈತ ಕಮಲಾನಗರ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.  ಆ್ಯಪ್ ಮೂಲಕ ಆಹಾರ ಉತ್ಪನ್ನಗಳನ್ನು ವಿತರಿಸುವ ಸ್ವೀಗಿ ಕಂಪೆನಿಗೆ ಇತ್ತೀಚೆಗಷ್ಟೆ ಈತ ಸೇರಿದ್ದ. ಗ್ರಾಹಕರೊಬ್ಬರಿಗೆ ಆಹಾರವನ್ನು ತೆಗೆದುಕೊಂಡು ಬೈಕ್‍ನಲ್ಲಿ ಹೋಗುವಾಗ ಬೆಳಗ್ಗೆ 9 ಗಂಟೆ ಸಂದರ್ಭದಲ್ಲಿ ಶಂಕರಮಠ ವೃತ್ತದ ಬಳಿ ಹೆಬ್ಬಾಳ ಕಡೆಯಿಂದ ಸ್ಯಾಟಲೈಟ್ ಕಡೆಗೆ ಹೊರಟಿದ್ದ ಬಿಎಂಟಿಸಿ ಬಸ್ ಕೆಳಕ್ಕೆ ಸಿಕ್ಕಿದ್ದಾನೆ.

ಬೈಕ್ ಜಾರಿ ಬಿದ್ದನೋ ಅಥವಾ ಬಸ್ ತಾಗಿತೋ ಎಂಬುದು ಇನ್ನೂ ತನಿಖೆ ಕೈಗೊಳ್ಳಬೇಕಾಗಿದೆ. ಬಸ್ ಅಡಿ ಬಿದ್ದಾಗ ಹಿಂದಿನ ಚಕ್ರ ಆತನ ಮೇಲೆ ಹರಿದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin