ಬಿಎಸ್‍ಎಫ್ ಯೋಧರು ನಡೆಸಿದ ಎನ್‍ಕೌಂಟರ್ ನಲ್ಲಿ ಒಬ್ಬ ಉಗ್ರ ಢಮಾರ್..!

Spread the love

Encounter

ಶ್ರೀನಗರ, ಡಿ.14-ಕಾಶ್ಮೀರ ಕಣಿವೆಯ ಬಜ್ಜೇಹಾರದಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಯೋಧರು ಉಗ್ರಗಾಮಿಯೊಬನನ್ನು ಗುಂಡಿಟ್ಟು ಕೊಂದಿದ್ಧಾರೆ. ಹತನಾದ ಉಗ್ರನಿಂದ ಭಾರೀ ಪ್ರಮಾಣದ ಸ್ಫೋಟಕ, ಮದ್ದುಗುಂಡು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.  ಜಮ್ಮು ಮತ್ತು ಕಾಶ್ಮೀರದ ಬಜ್ಜೇಹಾರ್ ಪ್ರದೇಶದಲ್ಲಿ ನಿನ್ನೆ ಅವಿತಿರುವ ಬಗ್ಗೆ ಬಿಎಸ್‍ಎಫ್‍ಗೆ ಮಾಹಿತಿ ಲಭಿಸಿತು. ಆ ಸ್ಥಳವನ್ನು ಯೋಧರು ಸುತ್ತುವರೆದಾಗ ಅಡಗಿದ್ದ ಉಗ್ರರು ಗುಂಡು ಹಾರಿಸಿದರು. ನಿನ್ನೆ ರಾತ್ರಿಯಿಂದ ಗುಂಡಿನ ಚಕಮಕಿ ಮುಂದುವರಿದಿತ್ತು. ಇಂದು ಮುಂಜಾನೆ ಎನ್‍ಕೌಂಟರ್‍ನಲ್ಲಿ ಬೆಂಬಲಿತ ಉಗ್ರ ಹತನಾದ. ಈತನ ಬಳಿ ಪತ್ತೆಯಾಗಿರುವ ಶಸ್ತ್ರಾಸ್ತ್ರಗಳು ಹಾಗೂ ಮತ್ತಿತರ ವಸ್ತುಗಳಿಂದ ಈತ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕ ಎಂಬುದು ದೃಢಪಟ್ಟಿದೆ.

ಪರಾರಿಯಾಗಿರುವ ಇತರ ಉಗ್ರರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕಾಶ್ಮೀರದ ಸೋಪೋರ್  ನಲ್ಲೂ ಸೇನಾಪಡೆ ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin