ಬಿಎಸ್‍ಎಲ್‍ಎನ್‍ನಿಂದ ಪ್ರತಿ ಭಾನುವಾರ ಉಚಿತ ಕರೆ ಸೇವೆ

BSNL

ಬೆಂಗಳೂರು, ಆ.14-ಭಾರತ ಸಂಚಾರ ನಿಗಮವದ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್‍ವರ್ಕ್‍ನ ಮೊಬೈಲ್ ಮತ್ತು ಸ್ಥಿರ ದೂರವಾಣಿಗೆ ಮಾಡುವ ಕರೆಗಳಿಗೆ ಎಲ್ಲಾ ಭಾನುವಾರ ಅನಿಯಮಿತ ಉಚಿತ ಸೇವೆ ದೊರೆಯಲಿದೆ.  ಈ ಸಂಬಂಧ ಬಿಎಸ್‍ಎನ್‍ಎಲ್ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ.   ಪಾನ್ ಇಂಡಿಯಾ ಆಧಾರದ ಮೇಲೆ ಅನಿಯಮಿತ ಉಚಿತ ಕರೆ ಸೇವೆಯನ್ನು ಬಿಎಸ್‍ಎನ್‍ಎಲ್ ಒದಗಿಸುತ್ತಿದೆ. ಇದರ ಜೊತೆಗೆ ರಾತ್ರಿ 9ರಿಂದ ಬೆಳಗ್ಗೆ 7ರವರೆಗೆ ಅನಿಯಮಿತ ಉಚಿತ ಕರೆ ಯೋಜನೆ ಕೂಡ ಈಗಾಗಲೇ ಜಾರಿಯಲ್ಲಿದೆ.  ಈ ಸಂಬಂಧ ಎಲ್ಲ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಸಂದೇಶ ರವಾನಿಸಿದ್ದು , ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರವನ್ನೂ ಕೂಡ ನೀಡಲಾಗುತ್ತಿದೆ ಎಂದು ಬಿಎಸ್‍ಎನ್‍ಎಲ್ ಹೊರಡಿಸಿರುವ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin