ಬಿಗ್‍ಬಾಸ್ ಮನೆಗೆ ಚಿತ್ರ – ವಿಚಿತ್ರ ಸ್ಪರ್ಧಿಗಳು ಎಂಟ್ರಿ, ಇಲ್ಲಿದೆ ನೋಡಿ ಲಿಸ್ಟ್

Spread the love

Bigg-Boss--01
ಬೆಂಗಳೂರು. ಅ. 22 : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ 6ನೇ ಆವೃತ್ತಿಗೆ ನೆನ್ನೆ ಚಾಲನೆ ದೊರೆತಿದೆ. ಈ ಬಾರಿಯೂ ಸೆಲೆಬ್ರೆಟಿಗಳ ಜೊತೆ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದ್ದು, ಚಿತ್ರ ವಿಚಿತ್ರ ವ್ಯಕ್ತಿತ್ವದ ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿದ್ದಾರೆ. ಎಂದಿನಂತೆ ಈ ಬಾರಿಯೂ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿದ್ದು, 18 ಕಂಟೆಸ್ಟೆಂಟ್ ಗಳನ್ನು ನಿನ್ನೆ ಮನೆಗೆ ಬರಮಾಡಿಕೊಂಡರು. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ. ಹಿಂದಿನ ಸೀಸನ್ ನ ಬಿಗ್ ಬಾಸ್ ಸ್ಪರ್ಧಿಗಳು ಭಾಗವಹಿಸಿದ್ದರು.ಜೊತೆಗೆ ಹೊಸ ಕಂಟೆಸ್ಟೆಂಟ್ ಗಳ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಸ್ಪರ್ಧಿಗಳ ಪ್ರವೇಶಕ್ಕೂ ಮುನ್ನ ಸುದೀಪ್ ಬಿಗ್ ಬಾಸ್ ಮನೆಯ ಪರಿಚಯ ಮಾಡಿಕೊಟ್ಟರು. ಕಳೆದ ಬಾರಿಯ ಸೀಸನ್‍ಗಿಂತಲೂ ದೊಡ್ಡದಾಗಿರುವ ಬಿಗ್‍ಬಾಸ್ ಮನೆ ಮತ್ತಷ್ಟು ಆಕರ್ಷಕವಾಗಿದೆ. ಸ್ಪರ್ಧಿಗಳ ನಡುವಿನ ಪ್ರಯಾಣ ಅಧಿಕೃತವಾಗಿ ಆರಂಭವಾಗಿ ಜಗಳ, ವಾಗ್ವಾದ, ಮನಸ್ತಾಪ, ಗೆಳೆತನ, ಪ್ರೀತಿ ಎಲ್ಲವನ್ನೂ ನೋಡಲು ಪ್ರೇಕ್ಷಕರು ಸಿದ್ಧರಾಗಿದ್ದಾರೆ. ಇಂದಿನಿಂದ ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆಯ ಮಸಾಲ ಆರಂಭವಾಗಲಿದೆ.

ಬಿಗ್ ಬಾಸ್ ಸೆರೆಮನೆ ಸೇರಿರುವ ಸ್ಪರ್ಧಿಗಳ ಡೀಟೇಲ್ಸ್ ಮತ್ತು ಹಿನ್ನೆಲೆ ಈ ಕೆಳಗಿನಂತಿದೆ.

1. ಸೋನು ಪಾಟೀಲ್: ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ಇವರು ಮೂಲತಃ ಬಾಗಲಕೋಟೆಯವರು. ಸೋನು ಪಾಟೀಲ್ ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ.

2. ಆಂಡ್ರೂ : ಬಿಗ್ ಎಂಟ್ರಿ ನೀಡುತ್ತಲೇ ತಮ್ಮನ್ನು ತಾವು ತಿಂಡಿಪೋತ ಎಂದು ಪರಿಚಯಿಸಿಕೊಂಡ ಆಂಡ್ರೂ ಈ ಬಾರಿಯ ವಿಶೇಷ ಸ್ಪರ್ಧಿ. ನೋಡಲು ದಪ್ಪವಾಗಿರುವ ಇವರು ತಮ್ಮ ದೇಹದಿಂದಲೇ ಗಮನ ಸೆಳೆದಿದ್ದಾರೆ.

3. ಜಯಶ್ರೀ : ಕಿರುತೆರೆಯಲ್ಲಿ ಮಾಯಾಮೃಗ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನಟಿ ಜಯಶ್ರೀ ಅವರು ಬಿಗ್‍ಬಾಸ್‍ಗಾಗಿ ಅಮೆರಿಕದಿಂದ ಮತ್ತೆ ಆಗಮಿಸಿದ್ದಾರೆ. ಇವರಿಗೆ ಒಬ್ಬಳು ಮಗಳಿದ್ದು, ಅಮ್ಮ ಸ್ವಲ್ಪ ಭಾವನಾತ್ಮಕ ಜೀವಿ ಎನ್ನುತ್ತಾರೆ.

4. ರಾಜೇಶ್: ರಾಜಸ್ಥಾನ ಮೂಲದವರಾದರು ನಾನು ಕನ್ನಡಿಗ ಎಂದು ಎಂಟ್ರಿ ಕೊಟ್ಟವರು ರಾಜೇಶ್. ಬೆಳೆದದ್ದು ಬೆಂಗಳೂರಿನಲ್ಲಿ, ಕನ್ನಡ ಚೆನ್ನಾಗಿ ಮಾತನಾಡುತ್ತಾರೆ. ಇಲ್ಲಿ ನಾನು ಏನು ಎಂಬುದನ್ನು ಸಾಬೀತು ಪಡಿಸುತ್ತೇನೆ ಎಂದರು.

5. ಮುರಳಿ: ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಅಡುಗೆ ರುಚಿಯಾದ ಅಡುಗೆಯಿಂದ ಬಿಗ್‍ಬಾಸ್ ಮನಗೆಲ್ಲುತ್ತರಾ ನೋಡಬೇಕಿದೆ.

6. ಅಕ್ಷತಾ ಪಾಂಡವಪುರ: ರಂಗಭೂಮಿ ಕಲಾವಿದೆ ಯಾಗಿರುವ ನಟಿ ಅಕ್ಷತಾ ಪಾಂಡವಪುರ ಅವರು ಬಿಗ್ ಬಾಸ್ ನಾಟಕ ಅಲ್ಲ, ಜೀವನ ಎಂದು ಹೇಳುವ ಮೂಲಕ ಸ್ಪರ್ಧೆಗೆ ಸಿದ್ಧರಾಗಿದ್ದಾರೆ.

7. ರಕ್ಷಿತಾ ರೈ: ಕ್ರಿಕೆಟ್ ಕೋಚ್ ಆಗಿರುವ ಮಂಗಳೂರು ಮೂಲದ ರಕ್ಷಿತಾ ರೈ ಪಕ್ಕ ಧೋನಿ ಅಭಿಮಾನಿ. ಎಂ ಎಸ್ ಧೋನಿ ಕುರಿತ ಸಿನಿಮಾವನ್ನು 250 ಸಲ ನೋಡಿದ್ದಾರಂತೆ. ಸದ್ಯ ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಕ್ರಿಕೆಟ್ ಆಡುತ್ತಿದ್ದು, ನಾನು ಹೊರಗೆ ಹೇಗಿದ್ದೇ ಆಗಿಯೇ ಅಲ್ಲಿಯೂ ಇರುತ್ತೇನೆ ಎಂದು ಪ್ರವೇಶದ ಬಿಗ್‍ಬಾಸ್‍ಗೆ ಪ್ರವೇಶ ಪಡೆದಿದ್ದಾರೆ.

8.ರ‍್ಯಾಪಿಡ್ ರಶ್ಮಿ : ತಮ್ಮ ಮಾತಿನ ಮೂಲಕವೇ ಹಲವರನ್ನು ತಮ್ಮತ್ತ ಸೆಳೆಯುವ ಮಾತಿನ ಪಟಾಕಿ ಖ್ಯಾತಿಯ ರ್ಯಾಪಿಡ್ ರಶ್ಮಿ ತಮ್ಮ ಇಮೇಜನ್ನು ಕಾಪಾಡಿಕೊಂಡು ರಂಜಿಸಿಲು ಬಂದಿದ್ದಾಗಿ ತಿಳಿಸಿದ್ದಾರೆ. ಇಷ್ಟು ದಿನ ಮಾತಲ್ಲೇ ಕಿಕ್ ನೀಡಿದ್ದ ರಶ್ಮಿ ಎಂದಿನಂತೆ ಇರುತ್ತೇನೆ ಎಂದರು.

9. ಆಡಮ್ : ವಿಭಿನ್ನ ಶೈಲಿಯ ನೃತ್ಯ ಮಾಡುವ ಆಡಮ್ ಪಾಷಾ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಡ್ರ್ಯಾಗ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಆಡಮ್ ಪಾಷಾ ಬೆಂಗಳೂರಿನ ಫಸ್ಟ್ ಡ್ರ್ಯಾಗ್ ಕ್ವೀನ್ ಹೆಗ್ಗಳಿಕೆ ಹೊಂದಿದ್ದಾರೆ. ನಮ್ಮಂತ ಜನರು ಇರುತ್ತಾರೆ. ನಾವು ಎಲ್ಲಾ ಕೆಲಸ ಮಾಡಲು ಬರುತ್ತೇ ಎಂದು ಜನರಿಗೆ ತೋರಿಸುವುದೇ ನಮ್ಮ ಉದ್ದೇ ಎಂದರು.

10. ಕವಿತಾ ಗೌಡ: ಬೆಳ್ಳಿ ಪರದೆ ಕಿರುತೆರೆಯಲ್ಲಿ ಮಿಂಚಿರುವ ಕವಿತಾ ಗೌಡ, ತಮಿಳು, ತೆಲುಗುನಲ್ಲೂ ಮಿಂಚಿದ್ದಾರೆ. ಬಿಗ್‍ಬಾಸ್ ಮೂಲಕ ಮತ್ತೊಮ್ಮೆ ಜನರಿಗೆ ಮನರಂಜನೆ ನೀಡಲು ಬರುತ್ತಿದ್ದೇನೆ ಎಂದು ತಿಳಿಸಿದ್ದಾರೆ.

11. ಎವಿ ರವಿ: ಚಿನ್ನದ ಊರು ಕೋಲಾರದಲ್ಲಿ ಹುಟ್ಟಿ ಬಾಡಿಬಿಲ್ಡಿಂಗ್‍ನಲ್ಲಿ ವಿಶ್ವದ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲ. ಮಿಸ್ಟರ್ ಇಂಡಿಯಾ, ವಿಶ್ವ ಬಾಡಿ ಬಿಲ್ಡಿಂಗ್‍ನಲ್ಲಿ ಭಾಗವಹಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ಏಕಲವ್ಯ ಪ್ರಶಸ್ತಿ ಪಡೆದಿದ್ದು, ಅದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

12. ಶಶಿ ಕುಮಾರ್ : ಆಧುನಿಕ ಶೈಲಿಯಲ್ಲಿ ಕೃಷಿ ಮಾಡಲು ಮುಂದಾಗಿರುವ ಚಿಂತಾಮಣಿಯ ರೈತ ಯುವಕ ಶಶಿಕುಮಾರ್. ಬಿಗ್ ಬಾಸ್ ಮನೆಯ ಸಾಮಾನ್ಯ ಸ್ಪರ್ಧಿ. ತಾನು ಕೇವಲ ರೈತ ಮಾತ್ರವಲ್ಲ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿವೆ. ಕೃಷಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದು, ಕೃಷಿಯಲ್ಲೂ ಸಾಧನೆ ಮಾಡಬಹುದು ಎಂದು ಸಾಭೀತು ಪಡಿಸುವುದು ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

13. ರೀಮಾ : ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರೀಮಾ ತಾವು ಫೋನ್ ಬಿಟ್ಟು ಇರೋದಿಲ್ಲ. ಹೇಗೆ ಅಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರುತ್ತೇನೆ ಗೊತ್ತಿಲ್ಲ. ಆದರೆ ನಮ್ಮ ವೃತ್ತಿಯಲ್ಲಿರುವ ಮಂದಿಯಲ್ಲೂ ಸಾಕಷ್ಟು ಟ್ಯಾಲೆಂಟ್ ಇರುತ್ತೆ ಎಂಬುವುದನ್ನು ತಿಳಿಸಲು ಬಂದಿದ್ದೇನೆ. ಮಂಗಳೂರು ಬೆಡಗಿ ಎಂಬುವುದೇ ನ್ನ ಹ್ಯಾಷ್ ಟ್ಯಾಗ್ ಎಂದು ಎಂಟ್ರಿ ಕೊಟ್ಟರು.

14. ನವೀನ್ ಸಜ್ಜು : ಲೂಸಿಯಾ ಸಿನಿಮಾ ಗಾಯಕನಾಗಿ ಹೆಚ್ಚು ಖ್ಯಾತಿ ಪಡೆದಿರುವ ನವೀನ್ ಪ್ಯಾಥೋ ಸಿಂಗರ್ ಎಂದೇ ಹೆಸರು ಪಡೆದಿದ್ಧಾರೆ. ಸದ್ಯ ಕನಕ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೂ ಇಳಿದಿದ್ದು, ಬಿಗ್ ಬಾಸ್ ನನ್ನ ಜೀವನಕ್ಕೆ ಪ್ರಮುಖ ತಿರುವು ನೀಡುತ್ತೆ. ಸ್ಪರ್ಧೆಯನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಎಣ್ಣೆ ನಿಮ್ದು ಊಟ ನಮ್ದು ಎಂದು ಹೇಳುವ ಮೂಲಕ ನವೀನ್ ಬಿಗ್ ಬಾಸ್‍ಗೆ ಪ್ರವೇಶ ಪಡೆದರು.

15. ಸ್ನೇಹಾ ಆಚಾರ್ಯ: ಕೊರಿಯೋಗ್ರಾಫರ್ ಆಗಿರುವ ಸ್ನೇಹಾ ಅಚಾರ್ಯ ಅವರು ಮುಂದಿನ ತಿಂಗಳು ಮದುವೆ ಇದ್ದರೂ, ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. ಮದುವೆಗೂ ಮುನ್ನ ಏನಾದರೂ ಸಾಧಿಸಬೇಕು ಎಂದಿದ್ದೇನೆ. ಮುಂದೇ ಏನಾಗುತ್ತೆ ನೋಡಬೇಕು ಎನ್ನುತ್ತಲೇ ಪ್ರವೇಶ ಮಾಡಿದರು. ಆದರೆ 25 ದಿನಗಳಿಗಿಂತ ಹೆಚ್ಚು ದಿನ ಇರಲ್ಲ ಎಂಬ ಅಭಿಪ್ರಾಯ ಹಳೆ ಸ್ಪರ್ಧಿಗಳಿಂದ ಕೇಳಿ ಬಂತು.

16. ಆನಂದ್ : 16 ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟಿದ್ದು ಆನಂದ್, ಯಾದಗಿರಿ ಮೂಲಕ ಇವರು ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ . ಬಿಗ್ ಬಾಸ್ ಮನೆಯಲ್ಲಿ ಯಾವ ಬಸ್ ಬಿಡ್ತಾರೆ ಅಂತ ಕಾದು ನೊಡಬೇಕು .

18 : ಧನರಾಜ್ : ಇವರ ಒಬ್ಬ ವಾಯ್ಸ್ ಓವರ್ ಕಲಾವಿದರಾಗಿದ್ದಾರೆ.

Facebook Comments