ಬಿಗ್ ಬಾಸ್‍ ರಿಯಾಲಿಟಿ ಶೋನಲ್ಲಿ ಮಡಿವಾಳರಿಗೆ ಅವಮಾನ : ಕ್ಷಮೆ ಕೋರಲು ಆಗ್ರಹ

Spread the love

Bigg-Boss

ಹುಳಿಯಾರು, ಡಿ.16- ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಮಡಿವಾಳರ ಬಗ್ಗೆ ಪದಬಳಕೆಯನ್ನು ಹಾಸ್ಯಸ್ಪದ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಎಂದು ರಾಜ್ಯ ಮಡಿವಾಳ ಹೊರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್‍ಕುಮಾರ್ ರೈ ಆರೋಪಿಸಿದ್ದಾರೆ.  ಕಾರ್ಯಕ್ರಮದಲ್ಲಿ ದೋಬಿಘಾಟ್ ಎಂಬ ಪದ ಬಳಕೆ ಹೆಚ್ಚೆಚ್ಚು ಬಾರಿ ಬಳಸಲಾಗಿದೆ. ಇದನ್ನು ಕರ್ನಾಟಕದ ಎಲ್ಲ ಮಡಿವಾಳರೂ ಖಂಡಿಸಿದ್ದಾರೆ. ಕಾರ್ಯಕ್ರಮದ ನಿರೂಪಕರಾದ ಸುದೀಪ್ ಮತ್ತು ವಾಹಿನಿಯ ಮುಖ್ಯಸ್ಥರು ಮಡಿವಾಳರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಮುಂದೆ ಕಾರ್ಯಕ್ರಮದಲ್ಲಿ ದೋಬಿಘಾಟ್ ಪದ ಬಳಕೆಯನ್ನು ಕೈಬಿಟ್ಟು ಅದರ ಬದಲು ಮಡಿಕಟ್ಟೆ ಎಂದು ಬಳಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ  ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

>  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin