ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮೋದಿ ಮೋಡಿ

> ಕರ್ನಾಟಕದ ಅಭಿವೃದ್ದಿಗಾಗಿ ನೀವು ಹೊರಟಿದ್ದೀರಿ, ನಿಮಗೆ ವಿಜಯ ಸಿಕ್ಕೇ ಸಿಗುತ್ತದೆ, ಕರಟಕದಲ್ಲಿ  ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಮಾಡಲಿದೆ.

> ಅಭೂತಪೂರ್ವ ಗೆಲುವಿನೊಂದಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕನ್ನಡಲ್ಲಿ ಉಚ್ಚರಿಸಿದ ಪ್ರಧಾನಿ ಮೋದಿ.

> ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ತಲಾಕ್ ನಿಷೇಧಕ್ಕೆ ಹೋರಾಟ ಮಾಡಿದ್ದೇವೆ.

>  ಕೇವಲ ಅಭಿವೃದ್ದಿಕ್ ಬಿಜೆಪಿ ಸರ್ಕಾರದ ಉದ್ದೇಶ

> ಅಂಡರ್  19 ಕ್ರಿಕೆಟ್  ಟೀಮ್ ನ ವಿಶ್ವಕಪ್  ಗೆಲುವಿನ ಹಿಂದೆ ಕನ್ನಡಿಗ ರಾಹುಲ್ ದ್ರಾವಿಡ್ ಅವರ  ಪರಿಶ್ರಮವನ್ನು ಕೊಂಡಾಡಿದ ಪ್ರಹದಾನಿ ಮೋದಿ.

> ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಹೆಸರಲ್ಲಿ  ಕಾಂಗ್ರೆಸ್ ನ ಹಲವು ನಾಯಕರು ಕೋಟಿಗಟ್ಟಲೆ ಹಣ ನುಂಗುವ ಪ್ಲಾನ್ ಮಾಡಿದ್ದರು.

>  ಕಾಂಗ್ರೆಸ್ ಮುಕ್ತ ಕರ್ನಾಟಕದ  ಜೊತೆ ಭ್ರಷ್ಟಾಚಾರ ಮುಕ್ತ ಕರ್ನಾಟಕವಾಗುವ ಸಮಯ ಬಂದಿದೆ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ನಾನಾ ಮೈಲುಗಲುವುಗಳನ್ನೇ ಸ್ಥಾಪಿಸಿದೆ. ಹಲವು ಸಚಿವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳಿವೆ.

> ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕದಲ್ಲಿ ಸರ್ಕಾರದ ಅಧಿಕಾರಕ್ಕಿಂತ ಕ್ರಿಮಿನಲ್ ಗಳ ಅಧಿಕಾರವೇ ಹೆಚ್ಚಾಗಿದೆ. ಕ್ರಿಮಿನಲ್ ಗಳೇ ಆಡಳಿತ ನಡೆಸುತ್ತಿದ್ದಾರೆ.

> ಮಾಧ್ಯಮ ವರ್ಗದ ಯುವಕರು ಉದ್ಯೋಗಕ್ಕಾಗಿ ಕಾಯದೆ, ಉದ್ಯೋಗ ಸೃಷ್ಟಿಸಲು  ಹಾತೊರೆಯುತ್ತಿದ್ದಾರೆ.  ಇದಕ್ಕೆ ಕೇಂದ್ರದಿಂದ ಅವರು ಆರಂಭಿಸುವ ಯೋಜನೆಗಳಿಗೆ ಅನುದಾನ/ಸಾಲ  ನೀಡಲಾಗುತ್ತಿದೆ. ಈ ಮೂಲಕ ನಾವು ಯುವಕರ ಕೈ ಬಲಪಡಿಸಿದ್ದೇವೆ.

> ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟೈಟರು ಬೆಳೆಯುವ  ಟಿಪಿಓ – ಟೊಮೇಟೊ – ಪೊಟ್ಯಾಟೋ- ಆನಿಯನ್ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗಲಿದೆ

> ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ರೈತರಿಗಾಗಿ   ಕೇಂದ್ರ ಜಾರಿಗೆ ತಂದ ಯೋಜನೆಗಳು ಕರ್ನಾಟಕದಲ್ಲೇ ಹೆಚ್ಚು ಯಶಸ್ವಿಯಾಗಲಿವೆ. ಏಕೆಂದರೆ ಯಡಿಯೂರಪ್ಪನವರ ಹೃದಯದಲ್ಲಿ ರೈತರ ಪರ ಪ್ರೀತಿ ಬಲವಾಗಿದೆ.

>  ರೈತರು ಯೂರಿಯಾಗಾಗಿ ರಾತ್ರಿಯೆಲ್ಲಾ ಕಾಯಬೇಕಿತ್ತು, ಲಾಠಿ ಏಟು ತಿನ್ನಬೇಕಿತ್ತು, ಆದರೆ ಈ ಎಲ್ಲ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಮುಕ್ತಿ ನೀಡಿದೆ.

> ಸದ್ಯದಲ್ಲೇ 17000 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಲ್ಲಿ ಸಬ ಅರ್ಬನ್ ರೈಲು ಯೋಜನೆ ಆರಂಭವಾಗಲಿದೆ. ಬೆಂಗಳೂರಿನ ಬಹು ದಿನದ ಬೇಡಿಕೆಯೊಂದು ಈಡೇರಲಿದೆ

> ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 4 ವರ್ಷದಲ್ಲಿ ಕೇವಲ 975 ಕಿ. ಮೀ ಹೆದ್ದಾರಿ ಅಭಿವೃದ್ಧಿ ಪಡಿಸಿತ್ತು. ಆದರೆ ಬಿಜೆಪಿ ಸರ್ಕಾರ ಕೇವಲ 3 ವರ್ಷದಲ್ಲಿ 1600ಕಿ. ಮೀ ಹೆದ್ದಾರಿ  ನಿರ್ಮಾಣ ಮಾಡಿದೆ.

> ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅನುದಾನವನ್ನು ಕರ್ನಾಟಕಕ್ಕೆ ನೀಡಿದೆ. ಆದರೆ  ಕೇಂದ್ರದಿಂದ ಬಂದ ಅನುದಾನ ಕರ್ನಾಟಕದಲ್ಲಿ  ಬಳಕೆಯಾದಂತೆ ಕಾಣಿಸುತ್ತಿಲ್ಲ.

> ಎಂದಿನಂತೆ ಇಂದೂ ಸಹ ತಮ್ಮ ಆಡಳಿತಾವಧಿಯ ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿದ ಪ್ರಧಾನಿ ಮೋದಿ.

> ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ರಾಜ್ಯದ ಬಡವರು ಬ್ಯಾಂಕ್ಗಳಲ್ಲಿ ಖಾತೆ ತೆರೆದಿದ್ದಾರೆ. ಜನಧನ್ ಯೋಜನೆಯಿಂದ ರಾಜ್ಯದ 1.70 ಲಕ್ಷ ಜನರಿಗೆ ಉಪಯೋಗವಾಗಿದೆ.

> ಸ್ವಚ್ಛ ಭಾರತ ಯೋಜನೆಯಡಿ ಲಕ್ಷಾಂತರ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬಡವರ ಬದುಕನ್ನು ಹಸನಾಗಿಸುವುದು ಬಿಜೆಪಿಯ ಕಾರ್ಯ.

> ಒಂದು ದಿನ ಬೆಂಗಳೂರಿನಲ್ಲಿ ವಿದ್ಯುತ್ ಸ್ಥಗಿತವಾದರೆ ಏನಾಗುತ್ತದೆ? ಎಂದು ಆಲೋಚನೆ ಮಾಡಿದ್ದೀರಾ?. ಉಜ್ವಲಾ ಯೋಜನೆಯಡಿ ರಾಜ್ಯದ 7 ಲಕ್ಷ ಜನರಿಗೆ ಉಪಯೋಗವಾಗಿದೆ.

> ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಿಂದ ಬಂದ ಅನುದಾನ ರಾಜ್ಯದ ಜನರಿಗೆ ತಲುಪಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯಕ್ಕೆ 73,000 ಕೋಟಿ ಸಿಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಬಂದಾಗ ರಾಜ್ಯಕ್ಕೆ 2 ಲಕ್ಷ ಕೋಟಿಗೂ ಅಧಿಕ ಅನುದಾನ ಸಿಗುತ್ತಿದೆ.

> ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬದಲು ಇನ್ನು ಬಹಳಷ್ಟು ದಿನ ಬೇಕಾಗಿಲ್ಲ . ಕಾಂಗ್ರೆಸ್ ನಿರ್ಗಮದ ಬಾಗಿಲಲ್ಲಿ ನಿಂತಿದೆ.

> ಇಲ್ಲಿ ನೆರೆದಿರುವ ಜನಸಾಗರವನ್ನು ನಾನು ಹಿಂದೆಂದೂ  ನೋಡಿಲ್ಲ, ಇದು ನನ್ನ ಅದೃಷ್ಟ, ಇಡೀ ದೇಶವೇ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲು ಕೌಂಟ್  ಡೌನ್ ಶುರುವಾಗಿದೆ.

>  ಕರ್ನಾಟಕದ ಬಂಧು ಭಗಿನಿಯರೇ ಎಂದು ಕನ್ನಡಲ್ಲೇ ಭಾಷಣ ಆರಂಭಿಸಿದ ಮೋದಿ

>  ಬಸವೇಶ್ವರ, ರಾಣಿ ಚನ್ನಮ್ಮ, ಸರ್. ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ , ಶಿಶುನಾಳ ಷರೀಫ್ ಸೇರಿದಂತೆ ಮನ ವ್ಯಕ್ತಿಗಳನ್ನು  ನೆನೆಯುತ್ತ ಭಾಷಣ ಆರಂಭಿಸಿದ ಪ್ರಧಾನಿ  ಮೋದಿ.

ಬೆಂಗಳೂರಲ್ಲಿ ಮೋದಿ ಘರ್ಜನೆ, ಕಾಂಗ್ರೆಸ್ ಗೆ ರಣವೀಳ್ಯ  :  

ಬೆಂಗಳೂರು, ಫೆ.4- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಹೆಗ್ಗುರಿಯೊಂದಿಗೆ ಅರಮನೆ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ನವಕರ್ನಾಟಕ ಪರಿವರ್ತನಾ  ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಎದುರಾಳಿ ಪಕ್ಷಗಳ ನಿದ್ದೆಗೆಡಿಸುವ ಮೂಲಕ ಬಿಜೆಪಿ ಚುನಾವಣಾ  ರಣಕಹಳೆ ಮೊಳಗಿಸಿತು. ಈ ಮೂಲಕ ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನೇ ಹೆಬ್ಬಾಗಿಲು ಮಾಡಿಕೊಂಡು ಅಧಿಕಾರ ಹಿಡಿಯುವ ಭಾರೀ ಹುಮ್ಮಸ್ಸಿನೊಂದಿಗೆ ಖುದ್ದು ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ನರೇಂದ್ರಮೋದಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ರಣವೀಳ್ಯೆ ನೀಡಿದರು.

Modi--PM-03

ಕೇಂದ್ರ ಬಜೆಟ್ ಬಳಿಕ ರಾಜ್ಯದಲ್ಲಿ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಮೋದಿ ಭಾಗವಹಿಸಿದ್ದರಿಂದ ಅವರ ಮಾತುಗಳನ್ನು ಆಲಿಸಲು ಕರ್ನಾಟಕದ ನಾನಾ ಭಾಗಗಳಿಂದ ನಿರೀಕ್ಷೆಗೂ ಮೀರಿದ ಜನಸಾಗರವೇ ಹರಿದುಬಂದಿತು. ವಿಧಾನಸಭೆ ಚುನಾವಣೆಯ ಉದ್ಘಾಟನಾ ಸಮಾರಂಭ ಎಂದೇ ರಾಜಕೀಯ ವಲಯದಲ್ಲಿ ಬಿಂಬಿತವಾಗಿದ್ದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಪ್ರಮುಖವಾಗಿ ಕಾಂಗ್ರೆಸ್ ವಿರುದ್ದ ಶಕ್ತಿ ಪ್ರದರ್ಶಿಸಿ ಚುನಾವಣೆಗೆ ಸಿದ್ಧ ಎಂಬ ಸಂದೇಶವನ್ನು ರವಾನಿಸಿತು.

Modi--PM-05

ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷಗಳು ಅಧಿಕಾರಕ್ಕಿದ್ದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಸದ್ಯದಲ್ಲೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಭಾರೀ ಬಹುಮತದಿಂದ ಆಯ್ಕೆ ಮಾಡಬೇಕೆಂದು ಕರುನಾಡ ಜನತೆಗೆ ಕೋರಿದರು. ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸಿದ ಮೋದಿ, ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸುವ ಮೂಲಕ ಅಭಿವೃದ್ದಿಗೆ ಬಿಜೆಪಿಯೇ ಪರಿಹಾರ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲ ನೀಡಬಾರದೆಂದು ಹರಿಹಾಯ್ದರು.  ಪ್ರಮುಖ ವೇದಿಕೆಯಲ್ಲಿದ್ದ 27 ಮಂದಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಅನಂತಕುಮಾರ್ ಹೆಗ್ಡೆಗೆ ಮಾತನಾಡಲು ಅವಕಾಶ ನೀಡಲಾಯಿತು.   ತಮ್ಮ ಭಾಷಣದಲ್ಲಿ ಬಹುತೇಕರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದರು.

ಒಗಟ್ಟು ಪ್ರದರ್ಶನ:
ಬಹುದಿನಗಳ ನಂತರ ಬಿಜೆಪಿಯ ಎಲ್ಲ ನಾಯಕರು ತಮ್ಮ ಆಂತರಿಕ ಕಚ್ಚಾಟವನ್ನು ಮರೆತು ರಾಷ್ಟ್ರೀಯ ನಾಯಕರ ಮುಂದೆ ಒಗ್ಗಟ್ಟು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ನಾನೊಂದು ತೀರ, ನೀನೊಂದು ತೀರ ಎಂಬಂತೆ ಮುಖ ನೋಡುವಷ್ಟು ದೂರವಾಗಿದ್ದ ರಾಜ್ಯ ನಾಯಕರು ನಮ್ಮಲ್ಲಿ ಯಾವುದೇ ವೈಮನಸ್ಯ ಇಲ್ಲವೇ ಇಲ್ಲ ಎಂಬಂತೆ ಒಗಟ್ಟು ಪ್ರದರ್ಶಿಸಿದರು. ರಾಜ್ಯಾಧ್ಯಕ್ಷ ಯಡಿಯೂರಪ್ಪ ,ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ , ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಮುಖಂಡರಾದ ಆರ್.ಅಶೋಕ್, ಪ್ರಹ್ಲಾದ್ ಜೋಷಿ, ನಳಿನ್‍ಕುಮಾರ್ ಕಟೀಲ್, ಸುರೇಶ್ ಅಂಗಡಿ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಸಂಸದೆ ಶೋಭಾ ಕರಂದ್ಲಾಜೆ, ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ಪುರಂದರೇಶ್ವರಿ ಸೇರಿದಂತೆ ಮತ್ತಿತರರು ಪ್ರಮುಖ ವೇದಿಕೆಯಲ್ಲಿದ್ದರು.  ಪಕ್ಕದ ವೇದಿಕೆಯಲ್ಲಿ ವಿವಿಧ ಮೋರ್ಚಾಗಳ ಅಧ್ಯಕ್ಷರು, ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಪದಾಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.   ಮತ್ತೊಂದು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ನಮೋ ದಂಡು :
ಬೆಂಗಳೂರು, ಫೆ.4- ರಾಜಧಾನಿ ಬೆಂಗಳೂರಿನೆಲ್ಲೆಡೆ ಮೋದಿ ಮೇನಿಯಾ… ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಭಾಷಣ ಆಲಿಸಲು ರಾಜ್ಯದ ಎಂಟು ದಿಕ್ಕುಗಳಿಂದಲೂ ಜನ ಸಾಗರವೇ ಹರಿದು ಬಂದಿತ್ತು. ಅರ ಮನೆ ಮೈದಾನದಲ್ಲಿ ವಿರಾಟ್ ಶಕ್ತಿ ಪ್ರದರ್ಶನ ಕಂಡುಬಂದಿತ್ತು. ಪ್ರಧಾನಿ ಮೋದಿಯವರ ವ್ಯಕ್ತಿತ್ವವೇ ಹಾಗೆ. ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆಯುತ್ತದೆ. ಅವರ ಮಾತು ಕೇಳಲು ಜನ ತುದಿಗಾಲಲ್ಲಿ ನಿಂತಿರುತ್ತಾರೆ. ಎನ್‍ಡಿಎ ಸರ್ಕಾರದ ನಾಲ್ಕನೆ ವರ್ಷದ ಬಜೆಟ್ ನಂತರ ಮೊದಲ ಬಾರಿಗೆ ಭಾರೀ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಿರುವ ಮೋದಿ ಭಾಷಣ ಆಲಿಸಲು ಐಟಿ ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು, ವೈದ್ಯಕೀಯ ಕ್ಷೇತ್ರದ ಗಣ್ಯರು, ಬುದ್ಧಿಜೀವಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ಎಂಜಿನಿಯರ್‍ಗಳು ಸೇರಿದಂತೆ ಹಲವಾರು ಮುಖಂಡರು ಆಗಮಿಸಿದ್ದರು.

ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗಿ ಇದ್ದಂತೆ ಇರಲಿಲ್ಲ. ಮೇಲ್ನೋಟಕ್ಕೆ ಇದು ರಾಜಕೀಯ ಕಾರ್ಯಕ್ರಮವಾದರೂ ಜನ ಮೋದಿ ಅವರ ಭಾಷಣ ಆಲಿಸಲು ಸಾಗರೋಪಾದಿಯಲ್ಲಿ ಹರಿದು ಬಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಮಾಡುವ ಭಾಷಣವನ್ನು ಇಡೀ ದೇಶವೇ ನೋಡುತ್ತದೆ. ಬೆಂಗಳೂರಿಗರಾದ ನಾವು ರಾಜ್ಯದವರು ಏಕೆ ಖುದ್ದು ಕೇಳಬಾರದು ಎಂಬ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಈ ಕಾರ್ಯಕ್ರಮ ಮೂಲತಃ ಬಿಜೆಪಿಯ ಶಕ್ತಿ ಪ್ರದರ್ಶನವಾಗಿತ್ತು. ಸದ್ಯದಲ್ಲೇ ಎದುರಾಗಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಈ ಕಾರ್ಯಕ್ರಮ ಸಂಪೂರ್ಣ ಸಂಜೀವಿನಿಯಾಗಿ ಮಾರ್ಪಟ್ಟಿತ್ತು. ನಿರೀಕ್ಷೆಗೂ ಮೀರಿ ಜನರು ಸೇರಿದ್ದು ಬಿಜೆಪಿ ಮುಖಂಡರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿತ್ತು.

ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದರೂ ಬೆಳಗ್ಗೆ 9 ಗಂಟೆಯಿಂದಲೇ ಅರಮನೆ ಮೈದಾನದತ್ತ ಜನಸಾಗರ ಹರಿದು ಬಂದಿತ್ತು. ರಾಜ್ಯದ ಮೂಲೆ ಮೂಲೆಗಳಿಂದಲೂ ಖಾಸಗಿ-ಸರ್ಕಾರಿ ಬಸ್‍ಗಳು, ಖಾಸಗಿ ವಾಹನಗಳು, ಟೆಂಪೂ ಟ್ರಾವೆಲರ್‍ಗಳಲ್ಲಿ ಜನ ಆಗಮಿಸಿದ್ದರು. ಪೊಲೀಸರು ಬೆಳಗ್ಗೆ 9 ಗಂಟೆಯಿಂದಲೇ ಸ್ಥಳದಲ್ಲಿ ಹಾಜರಿದ್ದು, ಸುರಕ್ಷತಾ ಕಾರ್ಯಕ್ರಮ ಕೈಗೊಂಡಿದ್ದರು.   ಸಂಚಾರಿ ಪೊಲೀಸರು ಸಾಲುಗಟ್ಟಿ ಬರುತ್ತಿದ್ದ ವಾಹನಗಳನ್ನು ನಿಯಂತ್ರಿಸಲಾಗದೆ ಪರದಾಡಿದರು. ವಾಹನಗಳಿಂದ ಇಳಿದು ಜನ ಸಭಾಂಗಣದತ್ತ ನುಗ್ಗಿ ಬಂದಾಗ ನೂಕು ನುಗ್ಗಲುಂಟಾಗಿತ್ತು. ಎಷ್ಟೇ ಹರಸಾಹಸಪಟ್ಟರೂ ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಪರದಾಡಿದರು.

ಬಿಜೆಪಿಯ ಸ್ವಯಂ ಸೇವಕರು ಅಲ್ಲಲ್ಲಿ ನಿಂತು ಸಮಾವೇಶಕ್ಕೆ ಬಂದವರಿಗೆ ಮಾರ್ಗದರ್ಶನ ನೀಡಿ ನೆರವಾದರು. ಕಾರ್ಯಕ್ರಮಕ್ಕೆ ಬಂದ ಅಷ್ಟೂ ಜನರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೇಕ್ರಿ ಸರ್ಕಲ್ ಮೇಲ್ಸುತುವೆ ಮೇಲ್ಭಾಗದಿಂದ ಅರಮನೆ ಮೈದಾನ ರಸ್ತೆವರೆಗೂ ಸಂಚಾರ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿತ್ತು. ವಾಹನಗಳಿಗೆ ದೂರದರ್ಶನ ಕಚೇರಿ ಕಡೆಯಿರುವ ಸರ್ಕಸ್ ಮೈದಾನದಲ್ಲಿ ನಿಲುಗಡೆ ವ್ಯವಸ್ಥೆ ಮಾಡಿದ್ದರಿಂದ ಆ ಭಾಗದ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

> ಯಶಸ್ವಿಯಾಗಿ ಪರಿವರ್ತನಾ ಯಾತ್ರೆ ಮಾಡಿದ ಯಡಿಯೂರಪ್ಪನವರಿಗೆ ಪ್ರಧಾನಿ ಮೋದಿಯವರಿಂದ ಸನ್ಮಾನ

Modi--PM-06

>  ಪ್ರಧಾನಿ ಮೋದಿ ಭಾಷಣಕ್ಕೂ ಮುನ್ನ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭಾಷಣ.

 

> ಪ್ರಧಾನಿ ಮೋದಿಗೆ ನಾಡಪ್ರಭು  ಕೆಂಪೇಗೌಡ ಸ್ಮರಣಿಕೆ ನೀಡಿ ಗೌಡವಿಸಿದ ಯಡಿಯೂರಪ್ಪ

Modi--PM-03

> ವೇದಿಕೆಯಲ್ಲಿ ಯಡಿಯೂರಪ್ಪ, ಎಸ್ ಎಂ ಕೃಷ್ಣ ಸೇರಿಂದ ರಾಜ್ಯ ಮತ್ತು ಕೇಂದ್ರದ  ನಾಯಕರು ಹಾಜರು

Modi--PM-01

> ವೇದಿಕೆಯತ್ತ ಆಗಮಿಸಿದ ಪ್ರಧಾನಿ ಮೋದಿ

PM-Modi--01

Modi--PM-02

Modi--PM-04

>  ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಂದ ಸ್ವಾಗತ ಭಾಷಣ

> ಕೆಲವೇ ಕ್ಷಣದಲ್ಲಿ ಭಾಷಣ ಆರಂಭಿಸಲಿರುವ ಪ್ರಧಾನಿ ಮೋದಿ

> 3.25 ಕ್ಕೆ  ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ, ರಾಜ್ಯಪಾಲರೂ ಸೇರಿ, ಬಿಜೆಪಿ ನಾಯಕರಿಂದ ಪ್ರಧಾನಿಗೆ ಅದ್ದೂರಿ ಸ್ವಾಗತ

> ಕನ್ನಡಪರ ಸಂಘಟನೆಗಳ ತೀವ್ರ ವಿರೋಧ ನಡುವೆಯೂ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವುದಕ್ಕಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ರಣ ಕಹಳೆ ಮೊಳಗಿಸಲಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಬಿಜೆಪಿಯ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಖುದ್ದು ಪ್ರಧಾನಿಯೇ ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ವಿರುದ್ದ ಕಮಲ ಪಡೆ ಶಕ್ತಿ ಪ್ರದರ್ಶಿಸಿ ಚುನಾವಣೆಗೆ ಅಧಿಕೃತ ಚಾಲನೆ ಸಿಗಲಿದೆ.

>  ಪ್ರಧಾನಿಯವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಕಾಶ್ ಜಾವೇಡ್ಕರ್, ಡಿ.ವಿ.ಸದಾನಂದಗೌಡ, ಅನಂತಕುಮಾರ್, ರಮೇಶ್ ಜಿಗಜಿಣಗಿ, ನಿರ್ಮಲಾ ಸೀತಾರಾಮನ್, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

WhatsApp Image 2018-02-04 at 9.47.07 AM

> ಎಲ್ಲೆಲ್ಲೂ ಕೇಸರಿಮಯ:  ಸಮಾರೋಪ ಸಮಾರಂಭ ನಡೆಯುವ ಅರಮನೆ ಮೈದಾನದ ಸುತ್ತಮುತ್ತ ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯ ಆಳೆತ್ತರದ ಕಟೌಟ್‍ಗಳು, ಅಮಿತ್ ಷಾ, ಯಡಿಯೂರಪ್ಪ , ಸದಾನಂದಗೌಡ, ಅನಂತಕುಮಾರ್ ಸೇರಿದಂತೆ ಮತ್ತಿತರ ನಾಯಕರ ಫ್ಲೆಕ್ಸ್‍ಗಳ ಅಬ್ಬರ ಹೇಳತೀರದಾಗಿದೆ. ವಿಂಡ್ಸರ್‍ಮ್ಯಾನರ್ ವೃತ್ತದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲೂ ಕಣ್ಣು ಕುಕ್ಕುವಷ್ಟು ಬಿಜೆಪಿಯ ಬಾವುಟಗಳು ಹಾರಾಡುತ್ತವೆ. ಮೇಕ್ರಿವೃತ್ತ , ಟಿವಿ ಟವರ್ ಸೇರಿದಂತೆ ನಗರದ ಅರಮನೆ ಮೈದಾನದ ಸುತ್ತಮುತ್ತಲೂ ಮೋದಿ ಮತ್ತು ಅವರ ಸಂಗಡಿಗರ ಫ್ಲೆಕ್ಸ್‍ಗಳನ್ನು ಹಾಕಲಾಗಿದೆ.

BJP-Rally--01

>  ಮೋದಿ ಭೇಟಿ ಹಿನ್ನಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅರಮನೆ ಮೈದಾನ ಸುತ್ತಮುತ್ತ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ದೇಶದ ಪ್ರಧಾನಿ ಸ್ವಾಗತಕ್ಕೆ ಸಿದ್ದವಾಗಿದೆ.  ಇಂದು ಮುಂಜಾನೆಯಿಂದಲೇ ಅರಮನೆ ಮೈದಾನ ರಸ್ತೆ ಉದ್ದಕ್ಕೂ ಪೊಲೀಸ್ ಸಿಬ್ಬಂದಿಗಳು ಬಂದು ನಿಯೋಜನೆಗೊಂಡಿದ್ದಾರೆ.

BJP-Rally--02

>  ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನೇತೃತ್ವದ 90 ದಿನಗಳ ಪರಿವರ್ತನಾ ಯಾತ್ರೆಯ ಸಮಾರೋಪ ಇಂದು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.

>  ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರೂವರೆ ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಹಲವು ಕಡೆಗಳಿಂದ ಕಾರ್ಯಕರ್ತರು ಬಸ್ಸು, ಜೀಪುಗಳಲ್ಲಿ ಬಂದು ನಗರದಲ್ಲಿ ಜಮಾಯಿಸಿದ್ದಾರೆ.

BJP-Rally--04

> ಪ್ರಧಾನಿ ಮೋದಿಯವರು ಮಧ್ಯಾಹ್ನ 1 ಗಂಟೆಗೆ ದೆಹಲಿಯಿಂದ ಹೊರಟು 3.30ರ ವೇಳೆಗೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.ಬಳಿಕ ಅಲ್ಲಿಂದ ನೇರವಾಗಿ ವಿಶೇಷ ಹೆಲಿಕಾಪ್ಟರ್ ಮೂಲಕ 3.50ಕ್ಕೆ ಜೆಸಿನಗರದ ಹೆಲಿಪ್ಯಾಡ್‍ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ 3.55ಕ್ಕೆ ಸಮಾವೇಶಕ್ಕೆ ಆಗಮಿಸಿ, 1 ಗಂಟೆಗಳ ಕಾಲ ಭಾಷಣ ಮಾಡಲಿದ್ದಾರೆ.

> ನವೆಂಬರ್ 2ರಂದು ಆರಂಭವಾಗಿದ್ದ ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ 224 ಕ್ಷೇತ್ರಗಳಲ್ಲಿ ಸಂಚಾರ ನಡೆಸಿದೆ. ಇಂದು ಸಮಾರೋಪ ಸಮಾರಂಭ ನಡೆಯುತ್ತಿದೆ.

BJP-Rally--06

> ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಊಟದ ಸಮಿತಿಯನ್ನು ರಚಿಸಲಾಗಿದೆ. ಒಟ್ಟು ಆರು ಅಡುಗೆ ಮನೆಗಳಲ್ಲಿ ಕಾರ್ಯಕರ್ತರಿಗಾಗಿ ಊಟ ತಯಾರಿಸಲಾಗುತ್ತದೆ. ಒಟ್ಟು 600 ಮಂದಿ ಆಹಾರ ಸಿದ್ದಪಡಿಸುತ್ತಿದು 250 ಕೌಂಟರ್‍ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 2000 ಕಾರ್ಯಕರ್ತರ ತಂಡವನ್ನು ರಚಿಸಲಾಗಿದೆ.  ಭದ್ರತೆ ಉಸ್ತುವರಿಗಾಗಿ ಬೆಂಗಳೂರುನಗರ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿ ಗೌಡ ನೇತೃತ್ವದಲ್ಲಿ ಕಾರ್ಯಕರ್ತರನ್ನೊಳಗೊಂಡ ಭದ್ರತಾ ತಂಡ ರಚಿಸಲಾಗಿದೆ.

BJP-Rally--07

> ಕಾರ್ಯಕರ್ತರನ್ನು ಸಮಾವೇಶಕ್ಕೆ ತಂದುಬಿಡುವುದು ವಾಹನ ನಿಲುಗಡೆಯ ಸ್ಥಳ, ಊಟದ ಸ್ಥಳಗಳಿಗೆ ಕಳುಹಿಸುವ ಕೆಲಸವನ್ನು ಈ ತಂಡ ನಿರ್ವಹಿಸಲಿದೆ.
ಕಾರ್ಯಕರ್ತರಿಗೆ ಯಾವುದೆ ರೀತಿಯ ಆರೋಗ್ಯ ತೊಂದರೆಯಾದರೆ ಅರಮನೆಯ ಮೈದಾನದಲ್ಲಿ ಇದಕ್ಕಾಗಿ ತಾತ್ಕಾಲಿಕ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದೆ. ಡಾ.ವಾಸುದೇವ್ ಮತ್ತು ಅವರ ತಂಡ ಅಗತ್ಯ ಬಿದ್ದವರಿಗೆ ಚಿಕಿತ್ಸೆ ಕೊಡಲು ಸಿದ್ದವಾಗಿರುತ್ತದೆ.

BJP-Rally--09

>  ಅರಮನೆ ಮೈದಾನದಲ್ಲಿ 2 ಲಕ್ಷ ಕುರ್ಚಿಗಳನ್ನು ಹಾಕಲಾಗಿದ್ದು ಸಾರ್ವಜನಿಕರಿಗೆ, ಬಿಜೆಪಿ ಕಾರ್ಯಕರ್ತರಿಗೆ ಈ ಮೂಲಕ ಆಸನದ ವ್ಯವಸ್ಥೆ ಮಾಡಲಾಗಿದೆ. 3200 ಚದರಡಿಯಲ್ಲಿ ಸಮಾವೇಶಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಂಡಿದೆ. 1200 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

BJP-Rally--08

Sri Raghav

Admin