ಬಿಬಿಎಂಪಿಯನ್ನು 10 ವಲಯಗಳನ್ನಾಗಿ ವಿಂಗಡಿಸಲು ಸರ್ಕಾರ ನಿರ್ಧಾರ

KJ-George-Session

ಬೆಳಗಾವಿ, ನ.29- ಬಿಬಿಎಂಪಿಯನ್ನು ವೈಜ್ಞಾನಿಕವಾಗಿ 10 ವಲಯಗಳನ್ನಾಗಿ ವಿಂಗಡಿಸಲು ಸರ್ಕಾರ ನಿರ್ಧರಿಸಿದೆ. ಆಯಾ ವಲಯಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದ್ದಾರೆ. ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರು ಪ್ರಶ್ನೆ ಕೇಳಿದಾಗ ಹಾಲಿ ಇರುವ 8 ಬಿಬಿಎಂಪಿ ವಲಯಗಳನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, 8 ವಲಯಗಳನ್ನು ವಿಂಗಡಿಸಿ ವೈಜ್ಞಾನಿಕವಾಗಿ 10 ವಲಯಗಳಿಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಬಿಬಿಎಂಪಿ ಆಯುಕ್ತರಿಗೆ ಮತ್ತು ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಆಯ ವಲಯದಲ್ಲಿ ಸಂಗ್ರಹವಾದ ತೆರಿಗೆ ಪ್ರಮಾಣದಲ್ಲಿ ಸ್ಥಳೀಯ ಅಭಿವೃದ್ಧಿಗೆ ನಿರ್ದಿಷ್ಟ ಪ್ರಮಾಣವನ್ನು ಕಾಯ್ದಿರಿಸುವ ಮತ್ತು ಪ್ರತಿ ವಲಯಕ್ಕೂ ಪ್ರತ್ಯೇಕ ಆಯುಕ್ತರನ್ನು ನೇಮಿಸುವ ಬಗ್ಗೆ ಶಾಸಕ ಲಿಂಬಾವಳಿ ನೀಡಿದ ಸಲಹೆಯನ್ನು ಸಚಿರು ತಳ್ಳಿ ಹಾಕಿದರು.

ಕಾಯ್ದೆ ಪ್ರಕಾರ ಪ್ರತ್ಯೇಕ ವಲಯಕ್ಕೆ ಆಯುಕ್ತರನ್ನು ನೇಮಿಸಲು ಸಾಧ್ಯವಿಲ್ಲ. ಬದಲಾಗಿ ಜಂಟಿ ಆಯುಕ್ತರನ್ನು ನಿಯೋಜಿಸಲಾಗಿದೆ. ಸಂಗ್ರಹವಾದ ತೆರಿಗೆಯನ್ನು ಎಲ್ಲಾ ಪ್ರದೇಶಕ್ಕೂ ಸಮನಾಗಿ ಹಂಚಿಕೆ ಮಾಡಲಾಗುತ್ತಿದ್ದು, ಅದರಲ್ಲೂ ಹಿಂದುಳಿದ ಪ್ರದೇಶದಲ್ಲಿ, ಹೊಸದಾಗಿ ಬೆಂಗಳೂರಿಗೆ ಸೇರ್ಪಡೆಯಾದ 110ಹಳ್ಳಿಗಳು ಮತ್ತು ಪುರಸಭೆ, ನಗರಸಭೆಗೆ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು. ವಿಧಾನಸಭಾ ಕ್ಷೇತ್ರಗಳನ್ನು ಆಯಾ ವಲಯಗಳಿಗೆ ಸೇರ್ಪಡೆ ಮಾಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin