ಬಿಸಿಯೂಟ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ತಪ್ಪಿದ ಭಾರೀ ಅನಾಹುತ

Atturu

ಚಿಂತಾಮಣಿ, ಆ.19-ತಾಲೂಕಿನ ಕೈವಾರ ಹೋಬಳಿ ಅಟ್ಟೂರು ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿರುವ ಅನ್ನಪೂರ್ಣ ಅಕ್ಷರ ದಾಸೋಹ ಅಡುಗೆ ಕೋಣೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡು ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಭಾರೀ ಅನಾಹುತ ತಪ್ಪಿದೆ. ಶಾಲಾ ಕಟ್ಟಡದ ಪಕ್ಕದಲ್ಲಿಯೇ ಇರುವ ಅಡುಗೆ ಕೋಣೆಯಲ್ಲಿ ಅಡುಗೆ ಸಿಬ್ಬಂದಿಯಾದ ಪಾರ್ವತಮ್ಮ ಮತ್ತು ಸಹಾಯಕಿ ಪ್ರಭಾವತಮ್ಮ ಎಂದಿನಂತೆ ಸ್ಟೌವ್ ಅಂಟಿಸಿ ಅಡುಗೆ ಮಾಡುತ್ತಿದ್ದರು. ಅಡುಗೆ ಕೋಣೆಯಲ್ಲಿ ಪೈಪುನಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದ್ದು ಅದನ್ನು ಗಮನಹರಿಸದ ಅವರು ಎಂದಿನಂತೆ ಅಡುಗೆ ಮಾಡುತ್ತಿದ್ದರು.  ಅಡುಗೆ ಮಾಡುವಾಗ ಕಿಟಕಿಯಿಂದ ಜೋರು ಗಾಳಿ ಬೀಸುತ್ತಿದ್ದರಿಂದ ಉರಿಯುತ್ತಿರುವ ಗ್ಯಾಸ್ ಸ್ಟೌವ್ಗಳು ಪದೇ ಪದೇ ಆಫ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಅಡುಗೆ ಸಿಬ್ಬಂದಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸ್ವಲ್ಪಕಾಲ ಅಡುಗೆ ಕೋಣೆಯಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಗ್ಯಾಸ್ ಸೋರಿಕೆ ಯಾಗಿ ಕಟ್ಟಡದಿಂದ ಹೊರ ಹೋಗಲಿಕ್ಕೆ ಆಗದೆ ಸ್ಪೋಟಗೊಂಡಿದೆ.

ಸ್ಫೋಟದ ರಭಸಕ್ಕೆ ಇಡೀ ಅಡುಗೆ ಕೋಣೆಯ ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಒಳಗಡೆ ಬೆಂಕಿ ಹತ್ತಿಕೊಂಡು ಇಡೀ ಕಟ್ಟಡ ನಾಶವಾಗಿದೆ. ಅಡುಗೆ ಮಾಡುವ ಸಿಬ್ಬಂದಿ ಮತ್ತು ಸಹಾಯಕಿ ಕಟ್ಟಡದ ಹೊರಗಡೆ ಇರುವುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿ ದ್ದರೆ ಸಿಲೆಂಡರ್ಗೂ ಬೆಂಕಿ ತಗಲಿದೆ ಇರುವುದರಿಂದ ಭಾರೀ ಅನಾಹುತ ತಪ್ಪಿದೆ.  ಇನ್ನು ಅಡುಗೆ ಕೋಣೆಯ ಪಕ್ಕದಲ್ಲಿಯೇ ಇರುವ ಶಾಲಾ ಕೊಠಡಿಗಳಿಗೆ ಸ್ಫೋಟದಿಂದ ಯಾವದೇ ಹಾನಿಯಾಗಿಲ್ಲ ಆದರೆ ಕೊಠಡಿಯಲ್ಲಿ ಪಾಠ ಹೆಳುತ್ತಿದ್ದ ಶಿಕ್ಷಕರು ಮತ್ತು ಪಾಠ ಕೇಳುತ್ತಿದ್ದು ಸುಮಾರು 40ಕ್ಕೂ ಹೆಚ್ಚು ಮಕ್ಕಳು ಮತ್ತು ಗ್ರಾಮಸ್ಥರು ಸ್ಫೋಟದ ಶಬ್ಧಕ್ಕೆ ತೀವ್ರ ಭಯಭೀತರಾಗಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪಿಎಸ್ಐ ಲಿಯಾಖತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್ ಖಲೀಲ್ ರವರು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪದ್ಮಾರವರ ಜೊತೆ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.   ಕಟ್ಟಡ ತೆರವಿಗೆ ಅದೇಶ:-ಗ್ಯಾಸ್ ಸೋರಿಕೆಯಾಗಿ ಅಡುಗೆ ಕೋಣೆ ಸಂಪೂರ್ಣ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕಟ್ಟಡ ಕಳೆಕ್ಕೆ ಉರುಳಿಬಿದ್ದು ಹಾನಿಯಾಗುವ ಮುನ್ನ ಅಡುಗೆ ಕೋಣೆಯ ಕಟ್ಟಡವನ್ನು ಕೂಡಲೇ ತೆರೆವುಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹಮದ್ ಖಲೀಲ್ ಶಾಲೆಯ ಮುಖ್ಯ ಶಿಕ್ಷಕ ಶಮೀವುಲ್ಲಾಗೆ ಸೂಚಿಸಿದ್ದಲ್ಲದೆ ಗ್ಯಾಸ್ ಸೋರಿಕೆಗೆ ಕಾರಣವಾದ ಎಲ್ಲಾ ಪೈಪುಗಳನ್ನು ಬದಲಿಸುವಂತೆ ಅಕ್ಷರ ದಾಸೋಹ ಅಧಿಕಾರಿಗೆ ಸೂಚಿಸಿದರು.

► Follow us on –  Facebook / Twitter  / Google+

Sri Raghav

Admin