ಬಿಸಿಸಿಐ ಆಯ್ಕೆ ಸಮಿತಿಗೆ ಪ್ರಸಾದ್

Spread the love

MSK-Pra

ಮುಂಬೈ, ಸೆ.21- ಸುಪ್ರೀಂಕೋರ್ಟ್ ನೇಮಿಸಿದ್ದ ಲೋಧಾ ಸಮಿತಿ ಶಿಫಾರಸುಗಳನ್ನು ಗಾಳಿಗೆ ತೂರಿರುವ ಬಿಸಿಸಿಐ ಇಂದು ಮಾಜಿ ವಿಕೆಟ್ ಕೀಪರ್ -ಬ್ಯಾಟ್ಸ್‍ಮನ್ ಎಂ.ಎಸ್.ಕೆ.ಪ್ರಸಾದ್ ನೇತೃತ್ವದ ಐದು ಸದಸ್ಯರ ಆಯ್ಕೆ ಸಮಿತಿಯನ್ನು ಹೆಸರಿಸಿದೆ. ಇದರಲ್ಲಿ ಇಬ್ಬರು ಸದಸ್ಯರಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ ಯಾವುದೇ ಅನುಭವ ಇಲ್ಲದಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.   ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿಯಾಗಿ ಅಜಯ್ ಶಿರ್ಕೆ ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ಮಂಡಳಿಯ 87ನೆ ಸಾಮಾನ್ಯ ಸಭೆಯಲ್ಲಿ ಶಿರ್ಕೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin