ಬಿಹಾರದ 50 ವರ್ಷದ ಮಹಿಳೆ ಕಳಿಸಿದ ಗಿಫ್ಟ್ ಗೆ ಪ್ರಧಾನಿ ಮೋದಿ ಫಿದಾ..!
ನವದೆಹಲಿ, ಮೇ 25-ಬಡವರು ಮತ್ತು ಶ್ರಮಿಕ ವರ್ಗದವರ ಶ್ರೇಯೋಭಿವೃದ್ಧಿಯ ಧ್ಯೇಯವಾಕ್ಯದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾಳೆ ತೃತೀಯ ವರ್ಷಾಚರಣೆ. ಈ ಸಂದರ್ಭದಲ್ಲಿ ತ್ಯಾಜ್ಯದಿಂದ ಸೃಷ್ಟಿಸಿ ಕಲಾತ್ಮಕ ಉಡುಗೊರೆಯೊಂದನ್ನು ಕಳುಹಿಸಿದ ಮಹಿಳೆಯ ಪ್ರತಿಭೆಗೆ ಮೋದಿ ಬೆರಗಾಗಿದ್ದಾರೆ. ಬಿಹಾರದ ಸಮಷ್ಟಿಪುರದ 50 ವರ್ಷದ ಗೀತಾ ದೇವಿ ಕಾಗದ ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ಸೊಗಸಾದ ಬ್ಯಾಸ್ಕೆಟ್, ಹೂಬುಟ್ಟಿ ಇತ್ಯಾದಿ ತಯಾರಿಕೆಯಲ್ಲಿ ಸಿದ್ದಹಸ್ತರು. ಪುತ್ರ ಮನೋಜ್ ಕುಮಾರ್ ನೀಡಿದ ಸಲಹೆ ಮೇರೆಗೆ ಗೀತಾ ಇತ್ತೀಚೆಗೆ ಆಕರ್ಷಕ ಉಡುಗೊರೆಯೊಂದನ್ನು ಪ್ರಧಾನಿಗೆ ರವಾನಿಸಿದ್ದರು.
ಪ್ರತಿದಿನ ಮೋದಿಗೆ ಇಂಥ ನೂರಾರು ಉಡುಗೊರೆಗಳು ಅಭಿಮಾನಿಗಳಿಂದ ಸಲ್ಲಿಕೆಯಾಗುವುದು ಮಾಮೂಲಿ. ಆದರೆ ಈ ಮಹಿಳೆಯ ಪ್ರತಿಭೆಗೆ ಮಾರುಹೋದ ಮೋದಿ ಪತ್ರ ಮುಖೇನ ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಪತ್ರದಿಂದ ಈ ಕುಟುಂಬಕ್ಕೆ ಅಪಾರ ಸಂತಸವಾಗಿದೆ. ಮೋದಿಯೇ ಬರೆದ ಮೆಚ್ಚುಗೆ ಪತ್ರವನ್ನು ಅವರ ಮಗ ಓದಿದಾಗ ಗೀತಾ ಕಣ್ಣುಗಳು ಆನಂದದಿಂದ ಮಿನುಗಿದವು.
ನಿಮ್ಮ ಕಲಾಪ್ರೌಢಿಮೆಗೆ ನಾನು ಬೆರಗಾಗಿದ್ದೇನೆ. ಗುಡಿ ಕೈಗಾರಿಕೆ ಅಗಾಧ ಸಾಮಥ್ರ್ಯವು ನಿಮ್ಮ ಕಲಾಕೃತಿಯಲ್ಲಿ ಸಾಬೀತಾಗಿದೆ. ತ್ಯಾಜ್ಯಗಳನ್ನೇ ಬಳಸಿ ಉಡುಗೊರೆಗಳನ್ನು ತಯಾರಿಸುವ ನಿಮ್ಮ ಅಲೋಚನೆ ಅದ್ಭುತ. ಸ್ವಚ್ಛ ಭಾರತ ಅಭಿಯಾನಕ್ಕೂ ಸಉ ಸಹಕಾರಿ. ಅಲ್ಲದೇ ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಮೋದಿ ಪತ್ರದಲ್ಲಿ ಶ್ಲಾಘಿಸಿದ್ದಾರೆ. ಗೀತಾರ ಪತ್ನಿ ರಾಮಚಂದ್ರ ಜÁ ಸಣ್ಣ ಹಿಡುವಳಿದಾರ. ಹವ್ಯಾಸಕ್ಕಾಗಿ ತ್ಯಾಜ್ಯದಿಂದ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಗೀತಾ ಮೋದಿ ಸಲಹೆಯಿಂದ ಪ್ರೇರಿತರಾಗಿದ್ದಾರೆ. ತನ್ನಲ್ಲಿರುವ ಕಲೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ದಂಪತಿ ಕಾರ್ಯೋನ್ಮುಖರಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS