ಬೀದಿ ಬದಿ ವ್ಯಾಪಾರ ನಮ್ಮ ಹಕ್ಕು

Spread the love

bengaluruಬೆಂಗಳೂರು, ಆ.3- ಉದ್ಯಾನ ನಗರದಲ್ಲಿರುವ ಪಾದಚಾರಿ ಮಾರ್ಗ ಎಲ್ಲರಿಗೂ ಸೇರಿದೆ. ಬೀದಿಯಲ್ಲಿ ವ್ಯಾಪಾರ ಮಾಡುವುದು ನಮ್ಮ ಹಕ್ಕು. ನಮ್ಮನ್ನು ಒಕ್ಕಲೆಬ್ಬಿಸಲು ಹೊರಟರೆ ಅದನ್ನು ಸಹಿಸುವುದಿಲ್ಲ ಎಂದು ಬೀದಿ ಬದಿ ವ್ಯಾಪಾರಿಗಳು ಎಚ್ಚರಿಸಿದ್ದಾರೆ.  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರು ಬೀದಿ ಬದಿ ವ್ಯಾಪಾರಿಗಳು ಸಿಐಟಿಯು  ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.  ನಗರಗಳು ಬೆಳೆಯುತ್ತಿದ್ದಂತೆ ವಾಹನಗಳ ಸಂಖ್ಯೆಯು ಹೆಚ್ಚುತ್ತಿದೆ. ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು ಹೆಚ್ಚುತ್ತಿವೆ. ಹೆಚ್ಚಿನ ರಿಯಾಯಿತಿಗಳು ಅವರಿಗೆ ಸಿಗುತ್ತಿವೆ. ಕೇಂದ್ರ ಸರ್ಕಾರ ವಿದೇಶಿ ಕಂಪೆನಿಗಳಿಗೆ  ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.

ಇದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ನಾವು ಬೀದಿಗೆ ಬಿದ್ದಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬೀದಿಬದಿ ವ್ಯಾಪಾರಿಗಳು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ದರದಲ್ಲಿ ವಸ್ತುಗಳನ್ನು ಹಾಗೂ ಸೇವೆಗಳನ್ನು ನೀಡುತ್ತಾರೆ. ಬೆಂಗಳೂರಿನಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳು ಬೀದಿ ಬದಿ ವ್ಯಾಪಾರಿಯನ್ನೇ ಜೀವನೋಪಾಯವನ್ನಾಗಿ ನಂಬಿಕೊಂಡು ಬದುಕುತ್ತಿದ್ದಾರೆ. ತರಕಾರಿಗಳನ್ನು ಬೀದಿ ಬದಿ ಮಾರಾಟ ಮಾಡುವ ಮುಖಾಂತರ ವ್ಯವಸಾಯ ವ್ಯವಸ್ಥೆಯ ಭಾಗವಾಗಿದ್ದಾರೆ.    ನಿವೃತ್ತ ಹಿರಿಯ ನಾಯಕರು, ಅವಿದ್ಯಾವಂತರು ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಿದ್ದರೂ ಸರ್ಕಾರ, ಬಿಬಿಎಂಪಿ, ಪೊಲೀಸರು ನಮ್ಮನ್ನು ಎತ್ತಂಗಡಿ ಮಾಡಲು ಸಜ್ಜಾಗಿದ್ದಾರೆ. ಹಲವಾರು ಹೋರಾಟಗಳ ನಂತರ ಸಂಸತ್ ನಮಗೆ ಬೀದಿಯಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ನೀಡುವ ಕಾಯ್ದೆಯನ್ನು ಜಾರಿಗೆ ತಂದಿದೆ.

ಮತ್ತೊಂದಡೆ ನಮ್ಮಿಂದಸಂಚಾರ ದಟ್ಟಣೆ ಹಾಗೂ ತ್ಯಾಜ್ಯ ಸಮಸ್ಯೆ ಆಗುತ್ತಿದೆ ಎಂದು ಆಪಾದಿಸಿ ನಮ್ಮನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದೆ. ನಮ್ಮ ಜೀವಕ್ಕೆ ಬೆಲೆಯೇ ಇಲ್ಲವೆ? ಬಡವರಿಗೆ ಈ ದೇಶದಲ್ಲಿ ನ್ಯಾಯ ಸಿಗಲ್ಲವೇ? ಸರ್ಕಾರಗಳು ನಮ್ಮನ್ನು ಎತ್ತಂಗಡಿ ಮಾಡಿದರೆ ನಾವು ಎಲ್ಲಿ ಹೋಗಬೇಕು. ಜನಸಾಮಾನ್ಯರು ಮಾಲ್‍ಗಳು, ದೊಡ್ಡ ಹೊಟೇಲ್‍ಗಳಿಗೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು.  ದೊಡ್ಡ ದೊಡ್ಡ ವ್ಯಾಪಾರಸ್ಥರನ್ನು  ಮತ್ತಷ್ಟು ದೊಡ್ಡವರನ್ನಾಗಿ ಮಾಡಲು ಹೊರಟಿದೆಯೇ ಈ ಸರ್ಕಾರ ಎಂದು ಕಿಡಿಕಾರಿದರು.

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin