ಬುಕ್ಸ್ ತುಂಬಿದ ಬ್ಯಾಗ್ ಹೊತ್ತು ಶಾಲೆಗೆ ಹೋಗುವ ಶೇ.68ರಷ್ಟು ಮಕ್ಕಳಲ್ಲಿ ಬೆನ್ನುನೋವು ಸಮಸ್ಯೆ

school
ಕೋಲ್ಕತ್ತಾ, ಸೆ.6-ಮಣಭಾರದ ಪುಸಕ್ತಗಳಿರುವ ಚೀಲವನ್ನು ಹೊತ್ತು ಶಾಲೆಗೆ ಹೋಗುವ 7-13ರ ವಯೋಮಾನದ ಶೇಕಡ 68ರಷ್ಟು ಮಕ್ಕಳಲ್ಲಿ ಬೆನ್ನುನೋವು ಮತ್ತು ಗೂನುಬೆನ್ನು ಸಮಸ್ಯೆ ಎದುರಾಗಲಿದೆ ಎಂಬ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.  ಅಸೋಷಿಯೇಟೆಡ್ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಅಸ್ಸೋಚಾಮ್) ತನ್ನ ಆರೋಗ್ಯ ಆರೈಕೆ ಸಮಿತಿ ಅಡಿಯಲ್ಲಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಕಂಡಬಂದಿದೆ. ಇದು ಭಾರತದಲ್ಲಿನ ಬಹುತೇಕ ಎಲ್ಲ ಶಾಲಾ ಮಕ್ಕಳ ಸ್ಥಿತಿಯೂ ಇದೆ ಆಗಿದೆ. ಆರಂಭದಲ್ಲಿ ಲಘುವಾಗಿ ಕಾಣಿಸಿಕೊಳ್ಳುವ ಬೆನ್ನು ನೋವು ಕಾಲಕ್ರಮೇಣ ದೀರ್ಘಕಾಲದ ಯಾತನೆಯಾಗಿ ಪರಿಣಮಿಸಿ ಬಳಿಕ ಗೂನು ಬೆನ್ನಿಗೆ ಎಡೆ ಮಾಡಿಕೊಡುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

7-13 ವಯಸ್ಸಿನ ಶೇಕಡ 88ರಷ್ಟು ಶಾಲಾ ಮಕ್ಕಳು ತಮ್ಮ ತೂಕಕ್ಕಿಂತ ಶೇಕಡ 45ರಷ್ಟು ಹೆಚ್ಚಿನ ಭಾರದ ಚೀಲವನ್ನು ಹೊತ್ತು ಶಾಲೆಗಳಿಗೆ ತೆರಳುತ್ತಾರೆ. ಇದರಲ್ಲಿ ಕ್ರೀಡಾ ಪರಿಕರಗಳು, ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು ಇರುತ್ತವೆ. ಇಷ್ಟು ಭಾರವನ್ನು ಪ್ರತಿನಿತ್ಯ ಹೆಗಲಿನ ಮೇಲೆ ಇಳಿಬಿಟ್ಟ ಬ್ಯಾಗ್‌ನಲ್ಲಿ ತುಂಬಿಕೊಂಡು ಶಾಲೆಗೆ ಹೋಗುವುದರಿಂದ ಗಂಭೀರ ಸ್ವರೂಪದ ಬೆನ್ನುಹುರಿ ಹಾನಿ ಸಂಭವಿಸಿತ್ತದೆ ಹಾಗೂ ಸರಿಪಡಿಸಲು ಕಷ್ಟಸಾಧ್ಯವಾದ ಸಮಸ್ಯೆಗಳನ್ನು ತಂದೊಡ್ಡುತ್ತವೆ ಎಂದು ಸಮೀಕ್ಷೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಆರಂಭದಲ್ಲೆ ಬೆನ್ನಿನ ತಟ್ಟೆಲುಬು ಜರುವಿಕೆ, ಕತ್ತು ನೋವು, ಮತ್ತೆ ಮತ್ತೆ ಮರುಕಳಿಸುವ ಬೆನ್ನು ನೋವು, ಬೆನ್ನುಹುರಿಯ ಅಸಮರ್ಪಕ ಕಾರ್ಯನಿರ್ವಹಣೆ, ವಿರೂಪ ಭಂಗಿ, ಗೂನು ಬೆನ್ನು ಮೊದಲಾದ ತೊಂದರೆಗಳನ್ನು ಮಕ್ಕಳು ಚಿಕ್ಕವಯಸ್ಸಿನಲ್ಲೇ ಎದುರಿಸಬೇಕಾಗುತ್ತದೆ ಎಂದು ಆಸ್ಸೋಚಾಮ್ ಹೆಲ್ತ್ ಕಮಿಟಿ ಅಧ್ಯಕ್ಷ ಬಿ.ಕೆ.ರಾವ್ ಹೇಳಿದ್ದಾರೆ.

► Follow us on –  Facebook / Twitter  / Google+

Sri Raghav

Admin