ಬುದ್ಧಿ ಹೇಳಿದ ಮಹಿಳೆಯ ಬರ್ಬರ ಕೊಲೆ
ದಾವಣಗೆರೆ, ಅ.3-ಬುದ್ಧಿ ಹೇಳಿದ ಮಹಿಳೆಯನ್ನೇ ವ್ಯಕ್ತಿಯೋರ್ವ ಕೊಲೆಗೈದಿರುವ ಘಟನೆ ಹರಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ಕೋಡಿಹಳ್ಳಿ ಗ್ರಾಮದ ಗೋಣಿ ಬಸಮ್ಮ (60) ಕೊಲೆಯಾದ ಮಹಿಳೆ.ದುಡಿಯದೆ ಸುಮ್ಮನೆ ತಿರುಗಾಡುತ್ತಿದ್ದ ಶಿವಕುಮಾರನಿಗೆ ದುಡಿದು ಎಲ್ಲರಂತೆ ಸರಿಯಾಗಿ ಬದುಕು ಎಂದು ಗೋಣಿ ಬಸಮ್ಮ ಆಗಾಗ್ಗೆ ಬುದ್ಧಿ ಹೇಳುತ್ತಿದ್ದಳು. ಎಂದಿನಂತೆ ಭಾನುವಾರ ಕೂಡ ಶಿವಕುಮಾರನಿಗೆ ಬುದ್ಧಿ ಹೇಳುತ್ತಿದ್ದಾಗ ಕೋಪಗೊಂಡು ಗೋಣಿಬಸಮ್ಮನನ್ನು ಕಲ್ಲಿನಿಂದ ಬರ್ಬರವಾಗಿ ಜಜ್ಜಿ ಹತ್ಯೆಗೈದು ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.