ಬೂಕನಕೆರೆ ಸುತ್ತ ಚಿರತೆ ಭೀತಿ

Spread the love

leopard

ಕೆಆರ್ ಪೇಟೆ, ಅ.25- ತಾಲೂಕಿನ ಬೂಕನಕೆರೆ ಗ್ರಾಮದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡ ಪರಿಣಾಮ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.ಗ್ರಾಮದ ಹೊರವಲಯದ ಹಳ್ಳದ ಬಳಿ ಕಳೆದ ಒಂದು ವಾರದಿಂದ ಚಿರತೆ ಓಡಾಡುತ್ತಿದ್ದು, ಗ್ರಾಮದ ಜನ ಭಯಭೀತರಾಗಿದ್ದಾರೆ.ಜಮೀನಿನತ್ತ ತೆರಳಲು ಜನ ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಇಟ್ಟಿರುವ ಬೋನಿಗೆ ಈವರೆಗೆ ಚಿರತೆ ಬಿದ್ದಿಲ್ಲ. ಶೀಘ್ರವೇ ಚಿರತೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin