ಬೆಂಕಿಯಲ್ಲಿ ಬೆಂದು ಹೋದ ಆರು ಮಕ್ಕಳು

6Killed

ಬಾಲ್ಟಿಮೋರ್, ಜ.14-ಮೂರು ಮಹಡಿಗಳ ಮನೆಯೊಂದಕ್ಕೆ ಬೆಂಕಿ ಬಿದ್ದು ಆರು ಮಕ್ಕಳು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಅಮೆರಿಕದ ಬಾಲ್ಟಿಮೋರ್‍ನಲ್ಲಿ ಸಂಭವಿಸಿದೆ. ಈ ದುರಂತದಿಂದ ಇತರ ಮೂವರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆಯಾದರೂ ತೀವ್ರ ಸುಟ್ಟಗಾಯಗಳಾಗಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ. ಬಾಲ್ಟಿಮೋರ್‍ನ ಮೂರು ಮಹಡಿಗಳ ಮನೆಯಲ್ಲಿ ನಿನ್ನೆ ಈ ದುರ್ಘಟನೆ ಸಂಭವಿಸಿತು. ಸುದ್ದಿ ತಿಳಿದು ಸ್ಥಳಕ್ಕೆ ತೆರಳುವ ಹೊತ್ತಿಗೆ ಮನೆ ಬೆಂಕಿಗೆ ಆಹುತಿಯಾಗಿತ್ತು. ಅಗ್ನಿ ಆಕಸ್ಮಿಕದಲ್ಲಿ ಒಂಭತ್ತು ತಿಂಗಳಿನಿಂದ 11 ವರ್ಷ ವಯಸ್ಸಿನ ಆರು ಮಕ್ಕಳು ಜೀವಂತ ದಹನವಾಗಿದ್ದಾರೆ ಎಂದು ಅಗ್ನಿಶಾಮಕ ದಳದ ವಕ್ತಾರ ರೋಮನ್ ಕ್ಲಾರ್ಕ್ ತಿಳಿಸಿದ್ದಾರೆ.

ಕಟ್ಟಡದ ಎಲ್ಲ ಕಡೆಗಳಿಂದಲೂ ಬೆಂಕಿ ಜ್ವಾಲೆಗಳು ಉಗುಳುತ್ತಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಅನಾಹುತದಿಂದ ಮೂವರು ಮಕ್ಕಳು ಮತ್ತು ಮಹಿಳೆಯೊಬ್ಬಳನ್ನು ರಕ್ಷಿಸಲಾಗಿದೆ. ಆದರೆ ತೀವ್ರ ಸುಟ್ಟಗಾಯಗಳಾಗಿರುವ ಅವರು ಆಸ್ಪತ್ರೆಯಲ್ಲಿ ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin