ಬೆಂಕಿ ತಗುಲಿ ಮಹಿಳೆ ಸಾವು

Spread the love

firing

ಚಿಕ್ಕಮಗಳೂರು, ಅ.3-ಸೀಮೆಎಣ್ಣೆಯ ಪಂಪ್‍ಸ್ಟೌವ್‍ನಲ್ಲಿ ಅಡುಗೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬಸವನಹಳ್ಳಿಯ ನಿವಾಸಿ ಗಂಗಮ್ಮ (70) ಮೃತಪಟ್ಟ ಮಹಿಳೆ. ಗಂಗಮ್ಮ ಮನೆಯಲ್ಲಿ ಪಂಪ್‍ಸ್ಟೌವ್‍ನಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿಯು ಸೀರೆಗೆ ತಗುಲಿದೆ. ಇದು ಗಮನಕ್ಕೆ ಬಾರದೆ ಬೆಂಕಿಯು ದೇಹವೆಲ್ಲಾ ಹಬ್ಬಿದೆ.ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಗಂಗಮ್ಮ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

 

 

Facebook Comments

Sri Raghav

Admin