ಬೆಂಗಳೂರಲ್ಲಿ ಅಬ್ಬರಿಸಿ ಬೊಬ್ಬರಿದ ಮಳೆಗೆ 5 ಮಂದಿ ಬಲಿ

Spread the love

Bangalore-Rain--02

ಬೆಂಗಳೂರು. ಅ.13 : ಬೆಂಗಳೂರಿನಲ್ಲಿ ಮಳೆರಾಯ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಇಂದು ಸಂಜೆ ಸುರಿದ ಭಾರಿ ಮಳೆ ಹಲವು ಅವಘಡಗಳಿಗೆ ಕಾರಣವಾಗಿದೆ. ಗಂಟೆಗಳ ಕಾಲ ಬಿಟ್ಟು ಬಿಡದೆ ಸುರಿದ ಮಳೆಗೆ ಲಗ್ಗೇರಿ ರಾಜಕಾಲುವೆಯಲ್ಲಿ ತಾಯಿ – ಮಗಳು ನೀರಿನಲ್ಲಿ ಕೊಚ್ಚಿಹೋದರೆ, ಕುರುಬರಹಳ್ಳಿಯಲ್ಲಿ ಗೋಡೆ ಕುಸಿದು ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಅರ್ಚಕನೊಬ್ಬ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗುತ್ತಿದ್ದು ಒಟ್ಟಿನಲ್ಲಿ ಬೆಂಗಳೂರು ಸಂಪೂರ್ಣ ಜಲಾವೃತಗೊಂಡಿದೆ. ಇಂದು ಸುರಿದ ಸಾವಿನ ಮಳೆ 5 ಮಂದಿಯನ್ನು ಬಲಿ ಪಡೆದಿದೆ ಎನ್ನಲಾಗುತ್ತಿದೆ.

ಇಂದು ಸಂಜೆಯಿಂದ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿವೆ. ಮೆಜೆಸ್ಟಿಕ್, ಮಲ್ಲೇಶ್ವರಂ, ಯಶವಂತಪುರ, ಶಿವಾನಂದ ಸರ್ಕಲ್, ಎಂ.ಜಿ. ರಸ್ತೆ, ವಿಜಯನಗರ ಸೇರಿ ಹಲವೆಡೆ ಮಳೆಯ ಆರ್ಭಟ ಮುಂದುವರೆದಿದೆ. ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಕೆಲಸ ಮುಗಿಸಿ ಮನೆಗೆ ತೆರಳುವವರು ತೊಂದರೆ ಅನುಭವಿಸುವಂತಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನೂ 3 ದಿನಗಳ ಕಾಲ ಮಳೆ ಮುಂದುವರೆಯಲಿದ್ದ ಅದಿನ್ನೆಷ್ಟು ಅವಾಂತರಗಳನ್ನು ಸೃಷ್ಟಿಸಲಿದೆಯೋ.

ಲಗ್ಗೇರಿ ರಾಜಕಾಲುವೆಯಲ್ಲಿ ಕೊಚ್ಚಿಹೋದವರನ್ನು ತಾಯಿ ಮೀನಾಕ್ಷಿ (57) ಹಾಗೂ ಮಗಳು ಪುಷ್ಪಾ (22) ಎಂದು ಗುರುತಿಸಲಾಗಿದೆ. ಇನ್ನು ಕುರುಬರಹಳ್ಳಿಯ 18ನೇ ಕ್ರಾಸ್ ನಲ್ಲಿ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ ದಂಪತಿಯನ್ನು ಶಂಕರಪ್ಪ ಮತ್ತು ಕಮಲಪ್ಪ ಎಂದು ಗುರುತಿಸಲಾಗಿದೆ.

Facebook Comments

Sri Raghav

Admin