ಬೆಂಗಳೂರಲ್ಲಿ ಇಂಡೋ-ಆಸೀಸ್ ಫೈಟ್ : ಟಿಕೆಟ್’ಗಾಗಿ ಮುಗಿ ಬಿದ್ದ ಕ್ರಿಕೆಟ್ ಪ್ರೇಮಿಗಳು

Spread the love

Cricket--2

ಬೆಂಗಳೂರು,ಸೆ.26- ಸೆ. 28ರಂದು ಉದ್ಯಾನನಗರಿಯಲ್ಲಿ ನಡೆಯಲಿರುವ ಇಂಡೋ- ಕಾಂಗೂರುಗಳ ನಡುವಿನ ನಾಲ್ಕನೇ ಕಾದಾಟಕ್ಕೆ ಮಳೆರಾಯ ಅಡ್ಡಿ ಪಡಿಸುವ ಆತಂಕ ಎದುರಾಗಿದ್ದು ಇದರ ನಡುವೆಯೂ ಕ್ರಿಕೆಟ್ ಪ್ರೇಮಿಗಳು ಟಿಕೆಟ್ ಖರೀದಿಸಲು ಮುಗಿ ಬಿದ್ದಿದ್ದಾರೆ. ಪೇಟಿಎಂ ಸರಣಿಯ ಐದು ಪಂಧ್ಯಗಳಲ್ಲಿ ಭಾರತ ಈಗಾಗಲೇ ಮೂರರಲ್ಲಿ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ನಾಲ್ಕನೇ ಪಂಧ್ಯವನ್ನು ಉದ್ಯಾನ ನಗರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ. 28ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

Cricket--5

ಆದರೆ ಕಳೆದೆರಡು ದಿನಗಳಿಂದ ಉದ್ಯಾನನಗರಿಯಲ್ಲಿ ಮಳೆಯಾಗುತಿದೆ. ಇಂದೂ ಕೂಡ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ನಾಲ್ಕನೇ ಪಂಧ್ಯಕ್ಕೆ ವರುಣ ಅಡ್ಡ ಪಡಿಸಬಹುದು ಎಂಬ ಆತಂಕ ಎದುರಾಗಿದೆ. ಆದಾಗ್ಯೂ ಇಂದು ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‍ಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದರು.

Cricket--4

Cricket--01

Facebook Comments

Sri Raghav

Admin