ಬೆಂಗಳೂರಲ್ಲಿ ಕಾನೂನು ಬಾಹಿರ ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ, 6 ಮಂದಿ ಅರೆಸ್ಟ್

Spread the love

ccb branch

ಬೆಂಗಳೂರು, ಏ.4-ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾ ಬಾರ್ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು ಆರು ಮಂದಿಯನ್ನು ಬಂಧಿಸಿ ಮೂರು ಮೊಬೈಲ್, 900 ರೂ. ನಗದು ವಶಪಡಿಸಿಕೊಂಡಿದ್ದಾರೆ. ಸುಧಾಕರ್, ಅನೀಶ್, ಕಿರಣ್, ಕಾರ್ತಿಕ್, ಅವಿಕಾಕ್ ಕಿನೋ ಮತ್ತು ವಿಘ್ನೇಶ್, ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ 3ನೆ ಮುಖ್ಯರಸ್ತೆ ವಿ.ಎಸ್.ಪ್ಲಾಜಾ 4ನೆ ಮಹಡಿಯಲ್ಲಿ ತೆರೆಯಲಾಗಿದ್ದ ಸ್ಕೈ ಲೈನ್ ಕೆಫೆ ಎಂಬ ಹುಕ್ಕಾ ಬಾರ್‍ನಲ್ಲಿ ಗಿರಾಕಿಗಳಿಗೆ ಹುಕ್ಕಾ ಸೇದಲು ಪ್ರಚೋದಿಸಲಾಗುತ್ತಿತ್ತು.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹುಕ್ಕಾ ಬಾರ್ ಮೇಲೆ ದಾಳಿ ಮಾಡಿ ಹುಕ್ಕಾಗೆ ಬಳಕೆ ಮಾಡುವ ಪರಿಕರಗಳು, 3 ಮೊಬೈಲ್, 900 ರೂ. ನಗದು ವಶಪಡಿಸಿಕೊಂಡು ಆರು ಮಂದಿಯನ್ನು ಬಂಧಿಸಿದ್ದಾರೆ.  ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿ ಎಸಿಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ನಡೆಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin