ಬೆಂಗಳೂರಲ್ಲಿ ಕುಸಿದ ಮತ್ತೊಂದು ಕಟ್ಟಡ : 3 ಸಾವು, ತಲಾ 5 ಲಕ್ಷ ಪರಿಹಾರ

Building

ಬೆಂಗಳೂರು, ಫೆ. 15: ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಮೂವರು ಕಾರ್ಮಿಕ ಸಾವನ್ನಪ್ಪಿದ್ದು ಇನ್ನೂ ಹಲವು ಜನ ಕಾರ್ಮಿಕರು ಕಟ್ಟಡದ ಅವಶೇಷದ ಅಡಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿರುವ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದು, ಮೃತರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಕಟ್ಟಡ ಕುಸಿತದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚನೆ ಮಾಡಲಾಗುತ್ತದೆ. ಕಳಪೆ ಕಾಮಗಾರಿ, ನಿಯಮವಾಳಿಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿದೆಯೆ ಎಂಬುದನ್ನೆಲ್ಲಾ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸ್ಥಳದಲ್ಲೇ ಮೇಯರ್ ಮೊಕ್ಕಾಂ :

ಇನ್ನು ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು, ಗಾಯಾಳುಗಳ ಆಸ್ಪತ್ರೆ ವೆಚ್ಚವನ್ನು ಬಿಬಿಎಂಪಿ ಭರಿಸುವುದಾಗಿ ಹೇಳಿದ್ದು, ಮೃತರ ಕುಟುಂಬಕ್ಕೆ ಪರಿಹಾರ ನೀಡುವುದಾಗಿಯೂ ಹೇಳಿದ್ದಾರೆ.

ರಫೀಕ್ ಎನ್ನುವವರಿಗೆ ಈ ಸೇರಿದ ಕಟ್ಟಡ ಇದಾಗಿದ್ದು, ಆಂಧ್ರ ಮೂಲದ ಕೃಷ್ಣಾರೆಡ್ಡಿ ಎಂಬುವರ ಮೇಲುಸ್ತುವಾರಿಯಲ್ಲಿ ಕಟ್ಟಡ ಕಾಮಗಾರಿ ನಡೆಯುತಿತ್ತು. ವಸತಿ ಉದ್ದೇಶಕ್ಕಾಗಿ ಈ ಬಹುಮಹಡಿಯನ್ನು ನಿರ್ಮಾಣ ಮಾಡಲಾಗುತಿತ್ತು. ಕಟ್ಟಡ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗುತ್ತಿದ್ದು, ಕಟ್ಟಡದ ಎಂಜಿನಿಯರ್ ಮತ್ತು ಮಾಲೀಕರ ಮೇಲೆ ಪೊಲೀಸರು ದೂರು ದಾಖಲಿಸಲಿದ್ದಾರೆ.

Sri Raghav

Admin