ಬೆಂಗಳೂರಲ್ಲಿ ದಟ್ಟ ಮಂಜು : ವಿಮಾನ ಹಾರಾಟದಲ್ಲಿ ವ್ಯತ್ಯಯ
ದೇವನಹಳ್ಳಿ, ಡಿ.20- ಹವಾಮಾನ ವೈಪರೀತ್ಯದಿಂದಾಗಿ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 55 ರಾಷ್ಟ್ರೀಯ ಹಾಗೂ ಮೂರು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಕವಿದ ಕಾರಣ ಕೆಐಎಎಲ್ನಿಂದ ತೆರಳಬೇಕಾಗಿದ್ದ ಮೂರು ಅಂತಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಲಿಲ್ಲ.
ಲ್ಯಾಂಡ್ ಆಗಬೇಕಿದ್ದ ಎರಡು ವಿಮಾನಗಳನ್ನು ಚೆನ್ನೈ ಮತ್ತು ಹೈದರಾಬಾದ್ಗೆ ವರ್ಗಾಯಿಸಲಾಗಿತ್ತು. ಹಲವು ರಾಷ್ಟ್ರೀಯ ವಿಮಾನಗಳು ಕೂಡ ದಟ್ಟ ಮಂಜಿನಿಂದ ಹಾರಾಟ ನಡೆಸಲಿಲ್ಲ. ಬೆಳಗ್ಗೆ 5 ರಿಂದ 8ರ ವರೆಗೆ ವಿಮಾನ ಹಾರಾಟಕ್ಕೆ ತೊಂದರೆಯಾಯಿತು.