ಬೆಂಗಳೂರಲ್ಲಿ ಮೂರು ಹುಕ್ಕಾಬಾರ್ಗಳ ಮೇಲೆ ಸಿಸಿಬಿ ದಾಳಿ,15 ಮಂದಿ ಬಂಧನ
ಬೆಂಗಳೂರು, ಜ.23-ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಮೂರು ಹುಕ್ಕಾಬಾರ್ಗಳ ಮೇಲೆ ಸಿಸಿಬಿ ಪೊ ಲೀಸರು ದಾಳಿ ಮಾಡಿ 15 ಮಂದಿಯನ್ನು ಬಂಧಿಸಿದ್ದಾರೆ. ತಮಿಳುನಾಡಿನ ಪಂಕಜ್ ಅಗರವಾಲ್, ಹೈದರಾಬಾದ್ನ ಮೋಹನ್ ಕೃಷ್ಣ, ಮಣಿಪುರದ ಹುಂಗಾನಿಂಗ್, ಪಿಟೋಕಾ, ಅವೋಟೋ, ವಿಟೋಪು, ಮಶಾನ್ಗ್ಯಾಮ್, ಅಸ್ಸೋಂನ ಇಸ್ಲಾಂವುದ್ದೀನ್, ಬೆಂಗಳೂರಿನ ದೀಪಕ್, ಅನಿಕೇತ್, ಮೆಹುಲ್ ದುರ್ಗಾನಿ, ಸುಭಾಷ್ಸಿಂಗ್, ಸುಹಾನ್ಲಾಮ್ತಂಗ್ ಮಾನ್ಲೂನ್, ಕುಬೇರ್ ದೋಸ್ ಸುಬ್ಬಾ, ತೋಕ್ಚೋಮ್ ಸುನೀಲ್ಕುಮಾರ್ ಸಿಂಗ್ ಬಂಧಿತ ಆರೋಪಿಗಳು.
ಸುದ್ದಗುಂಟೇಪಾಳ್ಯ ಕ್ರೈಸ್ಟ್ ಕಾಲೇಜು ಸಮೀಪದ ಕೃಷ್ಣಾ ನಗರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕಾನೂನು ಬಾಹಿರವಾಗಿ ಹುಕ್ಕಾಬಾರ್ ತೆರೆದು ಅಪ್ರಾಪ್ತ ವಯಸ್ಸಿನ ಬಾಲಕರಿಗೂ ಪ್ರವೇಶ ನೀಡಿ ಯುವಕರು, ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗಿ ಪರಿವರ್ತಿತರಾಗಲು ಪ್ರೇರಣೆ ನೀಡುತ್ತಿದ್ದ ವಿಷಯ ತಿಳಿದ ಸಿಸಿಬಿ ಪೊ ಲೀಸರು ಬಾರ್ ಮೇಲೆ ದಾಳಿ ಮಾಡಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಹನುಮಂತನಗರ ವ್ಯಾಪ್ತಿಯ ಬುಲ್ಟೆಂಪಲ್ ರಸ್ತೆಯಲ್ಲಿನ ಮತ್ತೊಂದು ಹುಕ್ಕಾಬಾರ್ ಮೇಲೆ ದಾಳಿ ಮಾಡಿದ ಸಿಸಿಬಿಪೊ ಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸುಮಾರು 22 ಮಂದಿ ಯುವಕರು, ಕಾಲೇಜು ವಿದ್ಯಾರ್ಥಿಗಳು ಹುಕ್ಕಾ ಸೇದಲು ಗ್ರಾಹಕರಾಗಿ ಬಂದುದ್ದು ದುರ್ದೈವ. ದಾಳಿ ವೇಳೆ ಹುಕ್ಕಾಗೆ ಬಳಸುವ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕಲಾಸಿಪಾಳ್ಯ ವ್ಯಾಪ್ತಿಯ ಮಿನರ್ವ ಸರ್ಕಲ್ ಬಳಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಹುಕ್ಕಾಬಾರ್ ಮೇಲೆ ಸಿಸಿಬಿ ಪೊ ಲೀಸರು ದಾಳಿ ಮಾಡಿ ಆರು ಮಂದಿಯನ್ನು ಬಂಧಿಸಿ ವಿವಿಧ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಈ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್ ತೆರೆದು ಯಾವುದೇ ನಿಯಮಾವಳಿಗಳನ್ನು ಪಾಲಿಸದೆ ಕಾಲೇಜು ವಿದ್ಯಾರ್ಥಿಗಳು, ಯುವಕರಿಗೆ ಮಾದಕ ವ್ಯಸನಿಗಳಾಗಿ ಪರಿವರ್ತಿತರಾಗಲು ದುಷ್ಪ್ರೇರಣೆ ನೀಡುತ್ತಿದ್ದುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ದಾಳಿ ವೇಳೆ ಈ ಸ್ಥಳದಲ್ಲಿ ಸುಮಾರು 22 ಮಂದಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹುಕ್ಕಾ ಸೇದಲು ಗ್ರಾಹಕರಾಗಿ ಬಂದಿದ್ದು ಇವರ ಪೋಷಕರಿಗೆ ಸಾಮಾಜಿಕ ಕಳಕಳಿಯ ಸದುದ್ದೇಶದಿಂದ ಗಮನಕ್ಕೆ ತರಲಾಗಿದೆ. ಸಿಸಿಬಿಯ ಎಸಿಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿ ಶಿವಹುಚ್ಚಯ್ಯ ಮತ್ತಿತರರು ದಾಳಿಯಲ್ಲಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS